• 20 March 2019 18:56
Jai Kannada
Jai Kannada
Blog single photo
January 10, 2019

 ವಹಿವಾಟು ಮಿತಿ ದುಪ್ಪಟ್ಟಿನಿಂದ 60% ಜನರು ಜಿಎಸ್‌ಟಿಯಿಂದ ಪಾರು 


 ನವದೆಹಲಿ: ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್‌ಟಿ) ನೋಂದಣಿಗೆ ಮಿತಿಯನ್ನು 40 ಲಕ್ಷ ವಾರ್ಷಿಕ ವಹಿವಾಟಿಗೆ ದುಪ್ಪಟ್ಟುಗೊಳಿಸುವ ಕ್ರಮದಿಂದ 60% ನೋಂದಾಯಿತ ವ್ಯಾಪಾರಿಗಳು ಜಿಎಸ್‌ಟಿ ಜಾಲದಿಂದ ಹೊರಬಂದರೂ, ಆದಾಯದ ಮೇಲೆ ಕನಿಷ್ಠ ಪರಿಣಾಮ ಉಂಟಾಗುತ್ತದೆ.

.ಮಾರ್ಚ್ ಕೊನೆಯಲ್ಲಿ ಒಟ್ಟು 87 ಲಕ್ಷ ನೋಂದಾಯಿತ ವ್ಯಾಪಾರಿಗಳಿದ್ದು, ಸುಮಾರು 45 ಲಕ್ಷ ಮಂದಿ 20 ಲಕ್ಷ ವಹಿವಾಟನ್ನು ಹೊಂದಿದ್ದರು. ಉಳಿದವರಲ್ಲಿ 10 ಲಕ್ಷ ಮಂದಿ 40 ಲಕ್ಷ ವಹಿವಾಟಿಗಿಂತ ಹೆಚ್ಚಿಗೆ ಹೊಂದಿದ್ದರು ಎಂದು ದತ್ತಾಂಶ ತಿಳಿಸಿದೆ.

ಜಿಎಸ್‌ಟಿ ಮಂಡಳಿಯು ನೋಂದಾವಣೆ ಮಿತಿಯನ್ನು ಹೆಚ್ಚಿಸುವ ಯೋಜನೆಯನ್ನು ಚರ್ಚಿಸುತ್ತಿದೆ. ಕಾನೂನು ಸಮಿತಿಯು ಜಿಎಸ್‌ಟಿ ನೋಂದಣಿ ಮಿತಿಯನ್ನು 40 ಲಕ್ಷ ಹೆಚ್ಚಿಸಲು ಉದ್ದೇಶಿಸಿದ್ದರೆ ಬಿಹಾರ ಮುಂತಾದ ರಾಜ್ಯಗಳು ಈ ಮಿತಿಯನ್ನು 50 ಲಕ್ಷ ವಹಿವಾಟಿಗೆ ಹೆಚ್ಚಿಸಬೇಕೆಂದು ಒತ್ತಾಯಿಸುತ್ತಿವೆ. 

Recent Comments

Leave Comments

footer
Top