Jai Kannada
Jai Kannada
Blog single photo
January 09, 2019

ರಾಹುಲ್‌ರಿಂದ ದೇಶದ ಇಡೀ ಮಹಿಳಾ ಕುಲಕ್ಕೆ ಅವಮಾನ: ಮೋದಿ 

ನವದೆಹಲಿ: ಯಾರಾದರೂ ಮಹಿಳೆಯರು ದುರ್ಬಲರೆಂದು ಹಂಗಿಸಿದರೆ ಎಂಥವರಿಗಾದರೂ ಸಿಟ್ಟು ನೆತ್ತಿಗೇರುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಆಗಿದ್ದೂ ಕೂಡ ಇದೇ ರೀತಿ. ಪ್ರಧಾನಮಂತ್ರಿ ನರೇಂದ್ರ ಮೋದಿ ರಫೇಲ್ ಒಪ್ಪಂದದ ಬಗ್ಗೆ ಉತ್ತರಿಸಲಾಗದೇ ಓಡಿ ಹೋಗಿ 'ಮಹಿಳೆ'ಯೊಬ್ಬರ ಬಳಿ ತಮ್ಮನ್ನು ರಕ್ಷಣೆ ಮಾಡುವಂತೆ ಕೇಳಿದರು ಎಂದು ರಾಹುಲ್ ಗಾಂಧಿ  ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಉಲ್ಲೇಖಿಸಿ ವ್ಯಂಗ್ಯವಾಗಿ ಹೇಳಿದ್ದರಿಂದ ಮೋದಿ ಸಿಟ್ಟು ನೆತ್ತಿಗೇರಿತ್ತು.

 ರಕ್ಷಣಾ ಸಚಿವರ ಬಗ್ಗೆ ಈ ರೀತಿ ಪ್ರತಿಕ್ರಿಯಿಸಿ ರಾಹುಲ್ ಗಾಂಧಿ ಮಹಿಳೆಯರಿಗೆ ಅಗೌರವ ತೋರಿಸಿದ್ದಾರೆಂದು ಪ್ರಧಾನಿ ಮೋದಿ ವಾಗ್ದಾಳಿ ಮಾಡಿದರು. ಉತ್ತರ ಪ್ರದೇಶದ ಆಗ್ರಾದಲ್ಲಿ ಚುನಾವಣೆ ರಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ತನ್ನ ಟೀಕಾಕಾರರ ವಿರುದ್ಧ ಹಿಗ್ಗಾಮುಗ್ಗಾ ಜಾಡಿಸಿದರು. ವಿರೋಧ ಪಕ್ಷ ಮಹಿಳಾ ರಕ್ಷಣಾ ಸಚಿವೆಗೆ ಅವಮಾನ ಮಾಡುವ ಮಟ್ಟಕ್ಕೂ ಇಳಿದರು ಎಂದು  ಆರೋಪಿಸಿದರು.

 ನಮ್ಮ ರಕ್ಷಣಾ ಸಚಿವರು ವಿರೋಧಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ಅವರ ಸುಳ್ಳುಗಳನ್ನು ಬಟಾಬಯಲು ಮಾಡಿದ್ದಾರೆ. ಅವರು ಎಷ್ಟು ಬಡಬಡಿಸುತ್ತಾರೆಂದರೆ, ರಕ್ಷಣಾ ಸಚಿವರನ್ನು ಅವಮಾನಿಸುವ ಮಟ್ಟಕ್ಕೂ ಇಳಿದಿದ್ದಾರೆ. ಇದು ರಕ್ಷಣಾ ಸಚಿವರಿಗೆ ಮಾತ್ರ ಮಾಡಿದ ಅವಮಾನವಲ್ಲ. ರಾಷ್ಟ್ರದ ಇಡೀ ಮಹಿಳಾವರ್ಗಕ್ಕೆ ಮಾಡಿದ ಅವಮಾನ ಎಂದು ಮೋದಿ ವಿಷಾದಿಸಿದ್ದಾರೆ.

Recent Comments

Leave Comments

footer
Top