Jai Kannada
Jai Kannada
Blog single photo
January 09, 2019

ಆತ್ಮಹತ್ಯೆಗೆ ಯತ್ನಿಸಿದ ಯಶ್ ಅಭಿಮಾನಿ ರವಿ ಸಾವು 

ಬೆಂಗಳೂರು:  ಯಶ್ ಭೇಟಿ ಸಾಧ್ಯವಾಗಲಿಲ್ಲವೆಂದು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ರವಿ ರವಿ ರಘಾರಾಮ್ ಎಂಬ 26 ವರ್ಷ ವಯಸ್ಸಿನ ಯುವಕ ಮೃತಪಟ್ಟಿರುವ ಆಘಾತಕಾರಿ ಸುದ್ದಿ ವರದಿಯಾಗಿದೆ.

ದಾಸರಹಳ್ಳಿಯ ರವಿ ಯಶ್ ಅವರ ಹುಟ್ಟುಹಬ್ಬದಂದು ಶುಭಾಶಯ ಹೇಳಲು ಹೊಸ್ಕೇರಳ್ಳಿ ಬಳಿಯಿರುವ ಅವರ ಮನೆಗೆ ತೆರಳಿದ್ದ. ಆದರೆ ಯಶ್ ಅವರು ತಮ್ಮ ಹುಟ್ಟುಹಬ್ಬ ಆಚರಿಸುವುದು ಬೇಡವೆಂದು ಹೇಳಿ ಬೆಳಿಗ್ಗೆಯೇ ಮನೆಯಿಂದ ಹೊರಟಿದ್ದರು.

ಯಶ್ ಇಲ್ಲದಿರುವುದನ್ನು ಕಂಡು ಬೇಸರಗೊಂಡಿದ್ದ ಅಭಿಮಾನಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದ. ಶೇ. 80ರಷ್ಟು ಸುಟ್ಟಗಾಯಗಳಾಗಿದ್ದ ರವಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. 

Recent Comments

Leave Comments

footer
Top