• 24 March 2019 12:29
Jai Kannada
Jai Kannada
Blog single photo
January 09, 2019

ವೈನ್ ಗ್ಲಾಸ್ ತಲೆಗೆ ಹೊಡೆದುಕೊಂಡ ಪ್ರಿಯಾಂಕ ಚೋಪ್ರಾ 

ಮುಂಬೈ:  ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ತನ್ನ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ವಿಡಿಯೊ ಅಪ್ ಲೋಡ್ ಮಾಡಿದ್ದು, ತೀವ್ರ ಶ್ರಮದಿಂದ ಕೆಲಸ ನಿರ್ವಹಿಸಿದ ಬಳಿಕ ತುಂಬಾ ಬೋರ್ ಆಗಿದ್ದ ಪ್ರಿಯಾಂಕ ವೈನ್ ಮೊರೆ ಹೋಗುತ್ತಾರೆ.

ಕ್ವಾಂಟಿಕೊ ಚಿತ್ರಕ್ಕಾಗಿ ಸತತವಾಗಿ ಶೂಟಿಂಗ್‌ನಲ್ಲಿ ಪಾಲ್ಗೊಂಡ ಪ್ರಿಯಾಂಕಗೆ ಸೆಟ್‌ನಲ್ಲಿ ಬ್ಯಾಡ್ ಡೇ ಉಂಟಾಗಿತ್ತು. ಅದಕ್ಕಾಗಿ ಅವರು  ಮಾಡಿದ್ದೇನು, ವೈನ್ ಕುಡಿದ ಬಳಿಕ ಅದರ ಗ್ಲಾಸನ್ನು ತನ್ನ ತಲೆಗೆ ಹೊಡೆದುಕೊಂಡು ಒಡೆಯುತ್ತಾರೆ. ನೈನ್ ಟು ವೈನ್ ಕೆಲಸಮಾಡುವುದರಿಂದ ಹೀಗೆ ಸಂಭವಿಸುತ್ತದೆ. ಇದನ್ನು ನೀವು ಮನೆಯಲ್ಲಿ ಪ್ರಯೋಗಿಸಬೇಡಿ, ಕೆಟ್ಟ ದಿನದ ಬಳಿಕ ನಾನು ಕಳಪೆ ನಿರ್ಧಾರ ತೆಗೆದುಕೊಂಡೆ ಎಂದಿದ್ದಾರೆ.ವೈನ್ ಕುಡಿದ ಬಳಿಕ ವೈನ್ ಗ್ಲಾಸ್ ತನ್ನ ತಲೆಗೆ ಹೊಡೆದು ತನಗಾಗಿರುವ ಹತಾಶೆ, ನೋವನ್ನು ಹೊರಹಾಕುತ್ತಾರೆ.

 ಪ್ರಿಯಾಂಕ ಚೋಪ್ರಾ ವಿಡಿಯೊ

Recent Comments

Leave Comments

footer
Top