• 20 March 2019 18:57
Jai Kannada
Jai Kannada
Blog single photo
January 09, 2019

ಇಂತಹವರು ನನ್ನ ಅಭಿಮಾನಿಯಲ್ಲ: ಆಸ್ಪತ್ರೆಯಲ್ಲಿ ಯಶ್ ಹೇಳಿಕೆ 

ಬೆಂಗಳೂರು: ಕೆಜಿಎಫ್ ಹೀರೋ ಯಶ್ ಅವರು ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ಈ ಬಾರಿ ತಮ್ಮ ಹುಟ್ಟು ಹಬ್ಬ ಆಚರಿಸುವುದಿಲ್ಲವೆಂದು ವಿಡಿಯೊದಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದರು. ಆದರೂ ಯಶ್ ಅವರನ್ನು ಹುಟ್ಟುಹಬ್ಬದಲ್ಲಿ ಕಾಣಲಾಗದೇ ಬೇಸರಗೊಂಡ ಅಭಿಮಾನಿಯೊಬ್ಬ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ. ಯಶ್ ಅವರ ಹೊಸ್ಕೆರೆಹಳ್ಳಿಯ ನಿವಾಸದ ಎದುರು ಅವರನ್ನು ಕಾಣಲು ಕಾದು ಕುಳಿತಿದ್ದ ಅಭಿಮಾನಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಅವನನ್ನು ಆಸ್ಪತ್ರೆಗೆ ಸೇರಿಸಲಾಯಿತು.

ಶೇ. 70 ರಷ್ಟು ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಸಾವು, ಬದುಕಿನ ಹೋರಾಟ ಮಾಡುತ್ತಿದ್ದ ತಮ್ಮ ಅಭಿಮಾನಿ ರವಿಯನ್ನು ಕಾಣಲು ಆಸ್ಪತ್ರೆಗೆ ಭೇಟಿ ನೀಡಿದ ಯಶ್ ಬಳಿಕ ಮಾತನಾಡುತ್ತಾ, ಇಂತವರನ್ನು ನಾನು ಅಭಿಮಾನಿಯಾಗಿ ಸ್ವೀಕರಿಸುವುದಿಲ್ಲ. ಸಿನಿಮಾ ನಟರ ಬಗ್ಗೆ ಅಭಿಮಾನ ಇರಬೇಕು ನಿಜ. ಆದರೆ ಅವರ ಪ್ರಾಣಕ್ಕೆ ಅಪಾಯವಾಗುವ ಮಟ್ಟಕ್ಕೆ ಅಭಿಮಾನಿಗಳು ತಲುಪಬಾರದು. ಇವರನ್ನು ನಾನು ನಿಜವಾದ ಅಭಿಮಾನಿಯೆಂದು ಹೇಳುವುದೇ ಇಲ್ಲ. ಇದು ಸಮಾಜಕ್ಕೆ ತಪ್ಪು ಸಂದೇಶ ಕಳಿಸುತ್ತದೆ. ನೀವು ಏನು ಬೇಕಾದರೂ ಭಾವಿಸಿ ಎಂದು ಯಶ್ ಹೇಳಿದರು. 

Recent Comments

Leave Comments

footer
Top