• 20 January 2019 06:53
Jai Kannada
Jai Kannada
Blog single photo
January 09, 2019

 ಬಿಎಂಟಿಸಿ ಬಸ್‌ಗಳ ಮೇಲೆ ಕಲ್ಲುತೂರಾಟ: ಸಾರಿಗೆ ಸಂಸ್ಥೆಗೆ ಲಕ್ಷಾಂತರ ರೂ. ನಷ್ಟ 

 ಬೆಂಗಳೂರು: ನಿನ್ನೆ ಭಾರತ್ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಇಂದು ಪ್ರತಿಭಟನೆಕಾರರು ಹೇಗಾದರೂ ಬಸ್ ಸಂಚಾರ ನಿಲ್ಲಿಸಬೇಕೆಂದು ತೀರ್ಮಾನಿಸಿ ಬಿಎಂಟಿಸಿ ಬಸ್‌ಗಳ ಮೇಲೆ ಕಲ್ಲು ತೂರಿದ್ದರಿಂದ ಬಸ್  ಸಂಚಾರ ದಿಢೀರ್ ಸ್ಥಗಿತಗೊಂಡಿದೆ.

ನಿನ್ನೆಯಿಂದ ಇದುವರೆಗೆ ಸುಮಾರು 27 ಬಸ್‌ಗಳ ಮೇಲೆ ಕಲ್ಲು ತೂರಾಗಿದ್ದು, ಕೆಲವು ಬಸ್ಸಿನ ಗಾಜು ಪುಡಿಪುಡಿಯಾಗಿವೆ.  ಮೆಜೆಸ್ಟಿಕ್‌ನಲ್ಲಿ ಬಸ್ ಸಂಚಾರ ಬಹುಮಟ್ಟಿಗೆ ಸ್ಥಗಿತಗೊಂಡಿದ್ದು, ಬಸ್ಸುಗಳಿಲ್ಲದೇ ಪ್ರಯಾಣಿಕರು ಪರದಾಡುವಂತ ಸ್ಥಿತಿ ಬಂದಿದೆ.

ಇದರಿಂದ ಓಲಾ, ಉಬರ್ ಕ್ಯಾಬ್‌ಗಳ ಸೇವೆಯನ್ನು ಪ್ರಯಾಣಿಕರು ನೆಚ್ಚಿಕೊಂಡಿದ್ದಾರೆ. ಆಟೋ ಚಾಲಕರು ದುಪ್ಪಟ್ಟು ಹಣ ವಸೂಲಿಗೆ ಇಳಿಯುತ್ತಿದ್ದು, ಕೆಲವು ಕಡೆ ಆಟೋ ಚಾಲಕರಿಗೆ ಪೊಲೀಸರು ದಂಡವನ್ನು ಕೂಡ ಹಾಕಿದ್ದಾರೆ.
 

Recent Comments

Leave Comments

footer
Top