• 20 March 2019 19:07
Jai Kannada
Jai Kannada
Blog single photo
January 09, 2019

ಕೆರೆಗಳು ಅಳಿವಿನ ಹಂತದಲ್ಲಿದ್ದರೂ ಕೇಂದ್ರಕ್ಕೆ ಪ್ರಸ್ತಾವನೆಯಿಲ್ಲ

ಬೆಂಗಳೂರು: ಬೆಂಗಳೂರಿನ ಕೆಲವು ಕೆರೆಗಳು ನಶಿಸುವ ಹಂತದಲ್ಲಿದ್ದರೂ ನಮ್ಮ  ಪ್ರದೇಶದ ಜಲರಾಶಿಗಳಿಗೆ ಯಾವುದೇ ಕಾಯಕಲ್ಪ ನೀಡುವ ಅಗತ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಹೇಳುತ್ತಿದೆ. ಜಲರಾಶಿಗಳ ದುರಸ್ತಿ, ನವೀಕರಣ ಮತ್ತು ಮರುಸ್ಥಾಪನೆ ಯೋಜನೆಯಡಿಯಲ್ಲಿ ಕೇಂದ್ರ ಸಚಿವಾಲಯವು ರಾಜ್ಯಗಳಿಗೆ ಜಲರಾಶಿಗಳ ಸುಧರಣೆ ಮತ್ತು ಪುನರ್ ಸ್ಥಾಪನೆಗೆ ನೆರವಾಗುತ್ತದೆ.

ಆದರೆ ಕರ್ನಾಟಕ ಸರ್ಕಾರ ಮಾತ್ರ ಇದರ ಬಗ್ಗೆ ಯಾವುದೇ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸದೇ ಮುಗುಮ್ಮಾಗಿ ಕುಳಿತಿದೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವ ಮಹೇಶ್ ಶರ್ಮಾ ರಾಜ್ಯಸಬೆಯಲ್ಲಿ ಮಾತನಾಡುತ್ತಾ ಮೇಲಿನ ವಿಷಯ ತಿಳಿಸಿದರು.

ಕೆರೆಗಳು ಮತ್ತು ಅಂತರ್ಜಲಗಳ ಪುನಶ್ಚೇತನ ಕುರಿತು ಸಂಸದ ರಾಜೀವ್ ಚಂದ್ರಶೇಖರ್ ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. 

Recent Comments

Leave Comments

footer
Top