• 20 January 2019 06:16
Jai Kannada
Jai Kannada
Blog single photo
January 09, 2019

ಹರಪ್ಪನ್ ಸಮಾಧಿಯಲ್ಲಿ ದಂಪತಿಯ ಅಸ್ಥಿಪಂಜರ ಪತ್ತೆ 

ಪುಣೆ: ಪುಣೆಯ ಡೆಕ್ಕನ್ ಕಾಲೇಜಿನ ವಿವಿಯಲ್ಲಿನ ಪುರಾತತ್ವ ಶಾಸ್ತ್ರಜ್ಞರು ಹರಪ್ಪನ್ ಕಾಲದ ಸ್ಮಶಾನದ ಸಮಾಧಿಯಲ್ಲಿ ಹೂಳಿದ, ಮಹಿಳೆ ಮತ್ತು ಪುರುಷನ ಎರಡು ಅಸ್ಥಿಪಂಜರಗಳನ್ನು ಪತ್ತೆಮಾಡಿದ್ದಾರೆ. ಪುರುಷನ ಮುಖ ಮಹಿಳೆ ಮುಖದತ್ತ ತಿರುಗಿರುವ ಈ ಅಸ್ಥಿಪಂಜರಗಳು ಒಂದೇ ಸಮಯದಲ್ಲಿ ಒಂದೇ ಬಾರಿಗೆ ಹೂಳಿರುವುದು ಕಂಡುಬಂದಿದೆ.

 ಹರಪ್ಪನ್ ಕಾಲದ ಸಮಾಧಿಯಲ್ಲಿ ಜಂಟಿಯಾಗಿ ಹೂಳಿದ ದಂಪತಿಯ ಅಸ್ಥಿಪಂಜರಗಳು ಎಂದು ಇವು ದೃಢಪಟ್ಟಿವೆ. ಹರ್ಯಾಣದ ರಾಖಿಗರಿ ಬಳಿ ಅಗೆದ ಹರಪ್ಪನ್ ವಸಾಹತುಗಳಲ್ಲಿ ಈ ದಂಪತಿಯ ಸಮಾಧಿ ಪತ್ತೆಯಾಗಿದ್ದು, ಒಂದೇ ಕಾಲದಲ್ಲಿ ಇವೆರಡು ಶವಗಳನ್ನು ಹೂಳಿರುವುದರ ಪುರಾವೆ ಸಿಕ್ಕಿರುವುದನ್ನು ಪುರಾತತ್ವ ಶಾಸ್ತ್ರಜ್ಞರು ಬೊಟ್ಟು ಮಾಡಿದ್ದಾರೆ.

 ಅನೇಕ ವಸಾಹತುಗಳು ಮತ್ತು ಸಮಾಧಿಗಳನ್ನು ಪತ್ತೆ ಮಾಡಿ ತನಿಖೆ ಮಾಡಲಾಗಿದ್ದರೂ ಹರಪ್ಪನ್ ಸ್ಮಶಾನಗಳಲ್ಲಿ ದಂಪತಿಯನ್ನು ಏಕಕಾಲದಲ್ಲಿ ಹೂಳಿದ ಉದಾಹರಣೆಗಳು ಇಲ್ಲಿವರೆಗೆ ವರದಿಯಾಗಿರಲಿಲ್ಲ. 
..
 

Recent Comments

Leave Comments

footer
Top