• 20 January 2019 06:38
Jai Kannada
Jai Kannada
Blog single photo
January 09, 2019

6 ಬಸ್‌ಗಳ ಮೇಲೆ ಕಲ್ಲು ತೂರಾಟ: ಬಸ್ ಸಂಚಾರ ವಿರಳ 


ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರದಲ್ಲಿ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಜನರು ಇಂದು ಮೆಟ್ರೋ ಕಡೆಗೆ ಮುಖ ಮಾಡಿದ್ದಾರೆ. ಮಾಗಡಿ-ಬೆಂಗಳೂರು ಮಾರ್ಗದ ಕೆಸ್ಸಾರ್ಟಿಸಿ ಬಸ್ ಮೇಲೆ ಕಲ್ಲು ತೂರಿದ ಘಟನೆ ಕಡಬಗೆರೆ ಗ್ರಾಮದ ಬಳಿ ಸಂಭವಿಸಿದೆ.

ಕೆಸ್ಸಾರ್ಟಿಸಿ, ಬಿಎಂಟಿಸಿಯ ಒಟ್ಟು 6 ಬಸ್ಸುಗಳ ಮೇಲೆ ಕಲ್ಲು ತೂರಲಾಗಿದೆ ಎಂದು ವರದಿಯಾಗಿದ್ದು, ಬಸ್ಸುಗಳ ಗಾಜುಗಳು ಪುಡಿ ಪುಡಿಯಾಗಿವೆ. ಇದರಿಂದ ಬಿಎಂಟಿಸಿ, ಕೆಸ್ಸಾರ್ಟಿಸಿ ಬಸ್ಸುಗಳನ್ನು ಇಂದು ರಸ್ತೆಗಿಳಿಸಲು ಚಾಲಕರು ಹೆದರಿದ್ದಾರೆ. ಬಳ್ಳಾರಿಯಲ್ಲಿ ನಾಲ್ಕು ಬಸ್‌ಗಳ ಮೇಲೆ ಕಲ್ಲುಗಳನ್ನು ತೂರಿದ ವರದಿಯಾಗಿದೆ.

ಇಂದು ಶಾಲೆ, ಕಾಲೇಜುಗಳಿಗೆ ರಜೆ ನೀಡದಿರುವುದರಿಂದ ಬಿಎಂಟಿಸಿ ಬಸ್ಸುಗಳಿಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಪ್ರಯಾಣಿಕರು ಕೂಡ ಬಸ್ ವಿರಳಗೊಂಡಿದ್ದರಿಂದ ಪರದಾಡುವಂತಾಗಿದೆ. ಏತನ್ಮಧ್ಯೆ ಪೊಲೀಸ್ ಭದ್ರತೆಯಲ್ಲಿ ಕೆಸ್ಸಾರ್ಟಿಸಿ ಬಸ್ಸುಗಳ ಸಂಚಾರವನ್ನು ಆರಂಭಿಸಲಾಗಿದೆ.    
 

Recent Comments

Leave Comments

footer
Top