• 24 March 2019 12:46
Jai Kannada
Jai Kannada
Blog single photo
January 08, 2019

ಭಾರತ್ ಬಂದ್:  ಕಾರ್ಮಿಕ ಸಂಘಟನೆಗಳ ಬೇಡಿಕೆಗಳೇನು? 

ಬೆಂಗಳೂರು: ಬೆಂಗಳೂರಿನಲ್ಲಿ ಭಾರತ್ ಬಂದ್ ದಿನವಾದ ಇಂದು ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ. ಟೌನ್‌ಹಾಲ್‌ನಿಂದ ಫ್ರೀಡಂಪಾರ್ಕ್‌ವರೆಗೆ ಅವು ಪ್ರತಿಭಟನಾ ರಾಲಿಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು.

 ಕೆಂಪು ಶರ್ಟ್ ಧರಿಸಿದ ಎಐಟಿಯುಸಿ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಕಾರ್ಪೊರೇಷನ್ ವೃತ್ತದ ಬಳಿ ಸೇರಿದ್ದರು. ಪ್ರತಿಭಟನೆಯಲ್ಲಿ ನೂರಾರು ಕಾರ್ಮಿಕರು ಭಾಗಿಯಾಗಿದ್ದರು. ಬಾಗಲಕೋಟೆ, ಗದಗದಲ್ಲಿ ಕೂಡ ಕೆಂಬಣ್ಣದ ಬಟ್ಟೆ, ಬಾವುಟ ಹಿಡಿದು ಪ್ರತಿಭಟನೆ ನಡೆಸಿದರು. ಸಾ.ರಾ. ಗೋವಿಂದು ಮತ್ತು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. 
 ಕಾರ್ಮಿಕ ಸಂಘಟನೆಗಳು ಮಂಡಿಸಿರುವ ಬೇಡಿಕೆಗಳು 
1.ಸಾರ್ವಜನಿಕ ಪಡಿತರ ವಿತರಣೆಯನ್ನು ಸಾರ್ವತ್ರೀಕರಣಗೊಳಿಸುವ ಮೂಲಕ ಬೆಲೆ ಏರಿಕೆಯನ್ನು ಹತೋಟಿಗೆ ತರುವ ತುರ್ತು ಕ್ರಮ ಮತ್ತು ಸರಕು ಮಾರುಕಟ್ಟೆಯಲ್ಲಿ ಊಹಾಪೋಹದ ವ್ಯಾಪಾರ ನಿಷೇಧ
2.ಉದ್ಯೋಗ ಸೃಷ್ಟಿಗಾಗಿ ದೃಢ ಕ್ರಮಗಳ ಮೂಲಕ ನಿರುದ್ಯೋಗ ಹತೋಟಿ
3. ಕಾರ್ಮಿಕ ಕಾನೂನುಗಳ ಕಟ್ಟುನಿಟ್ಟು ಜಾರಿ. ಕಾರ್ಮಿಕ ಕಾನೂನುಗಳ ಉಲ್ಲಂಘನೆಗೆ ಕಠಿಣ ಕ್ರಮಗಳು
3. ಎಲ್ಲಾ ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತೆ

5. 15000 ರೂ. ಕಡಿಮೆ ಇರದ ಕನಿಷ್ಠ ಮಾಸಿಕ ವೇತನ.
6. ಇಡೀ ದುಡಿಯುವ ವರ್ಗಕ್ಕೆ ಮಾಸಿಕ 3000 ರೂ. ಪಿಂಚಣಿ ವೃದ್ಧಿ
7. ಕೇಂದ್ರ ಮತ್ತು ರಾಜ್ಯ ಪಿಎಸ್‌ಯುಗಳಲ್ಲಿ ಬಂಡವಾಳ ಹಿಂತೆಗೆತ ನಿಲ್ಲಿಸಬೇಕು
8. ಕಾಯಂ ನೌಕರರಿಗೆ ನೀಡುವಷ್ಟೇ ವೇತನ ಮತ್ತು ಸೌಲಭ್ಯಗಳನ್ನು ಗುತ್ತಿಗೆ ಕೆಲಸಗಾರರಿಗೂ ನೀಡಬೇಕು.
9. ವೇತನದಲ್ಲಿನ ಎಲ್ಲಾ ಮಿತಿಗಳನ್ನು ಮತ್ತು ಬೋನಸ್ , ಭವಿಷ್ಯ ನಿಧಿ ಅರ್ಹತೆಗಳನ್ನು ತೆಗೆಯಬೇಕು.
 

Recent Comments

Leave Comments

footer
Top