• 23 September 2019 04:50
Jai Kannada
Jai Kannada
Blog single photo
January 07, 2019

ಆಧಾರ್ ಜತೆ ಚಾಲನಾ ಪರವಾನಗಿ ಲಿಂಕ್ ಶೀಘ್ರದಲ್ಲೇ ಕಡ್ಡಾಯ

ಫಾಗ್ವಾರಾ: ಆಧಾರ್ ಜತೆ ಚಾಲನಾ ಪರವಾನಗಿ ಲಿಂಕ್ ಮಾಡುವುದನ್ನು ಶೀಘ್ರದಲ್ಲೇ ಕಡ್ಡಾಯಗೊಳಿಸುವುದಾಗಿ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತಿದ್ದ ಅವರು, ಆಧಾರ್ ಅನ್ನು ಚಾಲನಾ ಪರವಾನಗಿ ಜತೆ ಜೋಡಿಸುವುದನ್ನು ಕಡ್ಡಾಯ ಮಾಡುವ ಕಾನೂನನ್ನು ನಾವು ಕೂಡಲೇ ತರುತ್ತೇವೆ ಎಂದು ನುಡಿದರು.

ಪ್ರಸಕ್ತ ಸನ್ನಿವೇಶದಲ್ಲಿ ತಪ್ಪಿತಸ್ಥ ವ್ಯಕ್ತಿ ಅಪಘಾತ ಉಂಟುಮಾಡಿ ಸ್ಥಳದಿಂದ ಪರಾರಿಯಾದ ಬಳಿಕ ಡೂಪ್ಲಿಕೇಟ್ ಪರವಾನಗಿ ಮಾಡಿಸುವುದರಿಂದ ಅವನು ಮುಕ್ತನಾಗಿ ಓಡಾಡುತ್ತಾನೆ.

 ಆಧಾರ್ ಜೋಡಣೆಯಿಂದ ನೀವು ಹೆಸರು ಬದಲಾಯಿಸಿದರೂ ನಿಮ್ಮ ಬಯೋಮೆಟ್ರಿಕ್ಸ್ ಮತ್ತು ಬೆರಳಚ್ಚುಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ ತಪ್ಪಿತಸ್ಥ ವ್ಯಕ್ತಿ ಡೂಪ್ಲಿಕೇಟ್ ಪರವಾನಗಿಗೆ ಯತ್ನಿಸಿದಾಗ ಈಗಾಗಲೇ ಪರವಾನಗಿ ಇರುವುದರಿಂದ ಹೊಸ ಪರವಾನಗಿ ನೀಡಲಾಗುವುದಿಲ್ಲ ಎಂದು ಸಿಸ್ಟಮ್ ತಿಳಿಸುತ್ತದೆ ಎಂದು ಆಧಾರ್ ಜೋಡಣೆಯ ಅಗತ್ಯದ ಬಗ್ಗೆ ಅವರು ತಿಳಿಸಿದರು.
 

Recent Comments

Leave Comments

footer
Top