• 19 March 2019 05:18
Jai Kannada
Jai Kannada
Blog single photo
January 07, 2019

ವಿಶ್ವಕಪ್ ಗೆಲುವನ್ನು ಮೀರಿಸಿದ ಜಯ ಎಂದ ವಿರಾಟ್ ಕೊಹ್ಲಿ 

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಜಯದಿಂದ ತೀವ್ರ ಸಂತಸರಾಗಿರುವ ಭಾರತ ತಂಡದ ಕಪ್ತಾನ ವಿರಾಟ್ ಕೊಹ್ಲಿ ಈ ಜಯವನ್ನು ಇಲ್ಲಿವರೆಗಿನ ಅತೀ ದೊಡ್ಡ ಸಾಧನೆ ಎಂದು ಬಣ್ಣಿಸಿದ್ದಾರೆ. 2011ರಲ್ಲಿ ವಿಶ್ವಕಪ್ ಗೆದ್ದ ಸಾಧನೆಗಿಂತ ಇದು ದೊಡ್ಡ ಜಯ ಎಂದು ರೇಟಿಂಗ್ ನೀಡಿದ್ದಾರೆ.

 ಸಿಡ್ನಿ ಟೆಸ್ಟ್ ಮಳೆಯಲ್ಲಿ ತೊಯ್ದುಹೋದ ಬಳಿಕ 2-1 ಸರಣಿ ಜಯ ಗೆದ್ದ ಬಳಿಕ ಭಾರತಕ್ಕೆ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಕೊಹ್ಲಿ, ನಾವು ವಿಶ್ವಕಪ್ ಗೆದ್ದಾಗ ನಾನು ತಂಡದ ಅತೀ ಕಿರಿಯ ಆಟಗಾರನಾಗಿದ್ದೆ. ಎಲ್ಲಾ ಆಟಗಾರರು ಭಾವುಕರಾಗಿದ್ದಾಗ ನನಗೆ ಅದೇನೂ ಭಾವನೆ ಇರಲಿಲ್ಲ. ಇಲ್ಲಿಗೆ ಮೂರು ಬಾರಿ ಬಂದ ಮೇಲೆ ವಿಶ್ವಕಪ್ ಗೆಲ್ಲುವುದು ಎಷ್ಟೊಂದು ಕಷ್ಟ ಎಂಬ ಅರಿವಾಯಿತು. ಆಗಲೇ ನನ್ನಲ್ಲಿ ಪರಿವರ್ತನೆ ಉಂಟಾಗಿ ನಾಲ್ಕು ವರ್ಷಗಳ ನಂತರ ಜಯಗಳಿಸಿದ್ದು ವಿಶೇಷವೆನಿಸಿದೆ ಎಂದು ಕೊಹ್ಲಿ ನುಡಿದರು.

ಚೇತೇಶ್ವರ ಪೂಜಾರ, ಮಾಯಾಂಕ್ ಅಗರವಾಲ್ ಮತ್ತು ತಂಡದ ಬೌಲರುಗಳನ್ನು ಕೊಹ್ಲಿ ವಿಶೇಷವಾಗಿ ಶ್ಲಾಘಿಸಿದರು. ಭಾರತದ ಬೌಲಿಂಗ್ ದಾಳಿಯಲ್ಲಿ ಈ ರೀತಿಯ ಮೇಲುಗೈಯನ್ನು ತಾನು ಕಂಡಿರಲಿಲ್ಲ ಎಂದು ಹೇಳಿದರು.

74.42 ರನ್ ಸರಾಸರಿಯೊಂದಿಗೆ ಸರಣಿಯಲ್ಲಿ 521 ರನ್ ಕಲೆಹಾಕಿದ ಚೇತೇಶ್ವರ್ ಪೂಜಾರ್ ಸರಣಿ ಪುರುಷೋತ್ತಮ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. 

Recent Comments

Leave Comments

footer
Top