• 20 March 2019 18:57
Jai Kannada
Jai Kannada
Blog single photo
January 01, 2019

ಹೊಸ ಜಿಎಸ್‌ಟಿ ದರಗಳು ಇಂದಿನಿಂದ ಜಾರಿ, ಅನೇಕ ಸರಕು, ಸೇವೆಗಳು ಮುಂಚಿಗಿಂತ ಅಗ್ಗ

 ನವದೆಹಲಿ: ಸುಮಾರು 23 ಸರಕುಗಳು ಮತ್ತು ಸೇವೆಗಳ ಮೇಲೆ ಜಿಎಸ್‌ಟಿ ದರಗಳನ್ನು ತಗ್ಗಿಸಿ ಸರ್ಕಾರ ಪ್ರಕಟಣೆ ಹೊರಡಿಸಿದೆ. ಇವುಗಳಲ್ಲಿ ಸಿನಿಮಾ ಟಿಕೆಟ್‌ಗಳು, ಟಿವಿ ಮತ್ತು ಮಾನಿಟರ್ ಸ್ಕ್ರೀನ್ ಕೂಡ ಸೇರಿವೆ.
ಇಂದಿನಿಂದ ಅಗ್ಗವಾಗಲಿರುವ ಸರಕುಗಳ ಸಂಪೂರ್ಣ ಪಟ್ಟಿ ಕೆಳಗಿನಂತಿದೆ

28%  ಜಿಎಸ್‌ಟಿಯಿಂದ 18% ಜಿಎಸ್‌ಟಿಗೆ ತಗ್ಗಿಸಿದ ಸರಕುಗಳು
 ಪಲ್ಲಿಗಳು, ಟ್ರಾನ್ಸ್‌ಮಿಷನ್ ಶ್ಯಾಫ್ಟ್‌ಗಳು, ಗೇರ್ ಬಾಕ್ಸ್, ಮಾನಿಟರ್ ಮತ್ತು 32 ಇಂಚಿನ ಗಾತ್ರದ ಟಿವಿಗಳು, ರಬ್ಬರಿನ ಬಳಕೆಯಾದ ನ್ಯೂಮ್ಯಾಟಿಕ್ ಟೈರ್‌ಗಳು, ಪವರ್ ಬ್ಯಾಂಕ್, ಲಿಥಿಯಮ್ ಅಯಾನ್ ಬ್ಯಾಟರಿಗಳು, ಡಿಜಿಟಲ್ ಕ್ಯಾಮರಾ ಮತ್ತು ವಿಡಿಯೊ ಕ್ಯಾಮರಾ ರೆಕಾರ್ಡರ್,  ಅಂಗವಿಕಲ ವ್ಯಕ್ತಿಗಳ ವಾಹನಗಳ ಬಿಡಿಭಾಗಗಳು.
    18% ನಿಂದ 12% ಜಿಎಸ್‌ಟಿ ಇಳಿಕೆಯಾದ ಸರಕುಗಳು
 ಸರಿಸುಮಾರು ಚೌಕಾಕಾರದ ಅಥವಾ ಸರಕು ತುಂಬಿದ ಕಾರ್ಕ್‌ಗಳು
    ನೈಸರ್ಗಿಕ ಕಾರ್ಕ್ ವಸ್ತುಗಳು
   ರಾಶಿಹಾಕಿದ ಕಾರ್ಕ್
 18% ನಿಂದ 5% ಜಿಎಸ್‌ಟಿ ದರ ಕಡಿಮೆ
    ಅಮೃತಶಿಲೆಯ ಕಲ್ಲು, ಮಣ್ಣುಗಳು

 12% ನಿಂದ 5%  ಜಿಎಸ್‌ಟಿ ಇಳಿಕೆಯ ಸರಕುಗಳು
ನೈಸರ್ಗಿಕ ಕಾರ್ಕ್, ವಾಕಿಂಗ್ ಸ್ಟಿಕ್, ಹಾರು ಬೂದಿ ಬ್ಲಾಕ್‌ಗಳು

12% ಯಿಂದ 0 ವರೆಗೆ ಜಿಎಸ್‌ಟಿ ದರ ಕುಸಿತ
ಸಂಗೀತದ ಪುಸ್ತಕಗಳು
 5% ನಿಂದ 0 ಗೆ ಜಿಎಸ್‌ಟಿ ಕುಸಿತ
   ಶೀತಲೀಕರಣ , ಬ್ರಾಂಡಡ್ ಮತ್ತು ಮತ್ತು ಕಂಟೇನರ್‌‌ನಲ್ಲಿ ಇರಿಸಿದ ತರಕಾರಿಗಳು
   ತಾತ್ಕಾಲಿಕವಾಗಿ ರಕ್ಷಿಸಿಟ್ಟ ತರಕಾರಿಗಳು. ಆದರೆ ತಕ್ಷಣಕ್ಕೆ ಸೇವಿಸಲು ಆ ಸ್ಥಿತಿಯಲ್ಲಿ ಸೂಕ್ತವಾಗಿಲ್ಲದಿರುವುದು
   ನವೀಕೃತ ಇಂಧನದ ಉಪಕರಣಗಳು ಮತ್ತು ಅವುಗಳ ಬಿಡಿಭಾಗಗಳ ಉತ್ಪಾದನೆಗೆ 5% ಜಿಎಸ್‌ಟಿ ದರ ನಿಗದಿ.
 100 ರೂ.ಗಿಂತ ಹೆಚ್ಚಿನ ದರ ಸಿನೆಮಾ ಟಿಕೆಟ್‌ಗಳಿಗೆ ಜಿಎಸ್‌ಟಿ ದರವು 28% ನಿಂದ 18% ಗೆ ಇಳಿಕೆ. 100ರೂವರೆಗೆ ಸಿನಿಮಾ ಟಿಕೆಟ್ ದರದಲ್ಲಿ 18% ನಿಂದ 12% ಇಳಿಕೆ. 
ಬ್ಯಾಂಕುಗಳಿಂದ ಮೂಲ ಉಳಿತಾಯ ಬ್ಯಾಂಕ್ ಖಾತೆದಾರರಿಗೆ ಪ್ರಧಾನಮಂತ್ರಿ ಜನ್ ಧನ್ ಯೋಜನೆಯನ್ವಯ ನೀಡುವ ಸೇವೆಗೆ ವಿನಾಯಿತಿ ನೀಡಲಾಗಿರುತ್ತದೆ.    

Recent Comments

Leave Comments

footer
Top