• 23 January 2020 22:47
Jai Kannada
Jai Kannada
Blog single photo
December 30, 2018

ಹೃದಯ ರೋಗಗಳಿಂದ ಸಾವು ಚಳಿಗಾಲದಲ್ಲಿ ಶೇ. 50ರಷ್ಟು ವೃದ್ಧಿ

ಹೃದಯಾಘಾತಗಳು ಮತ್ತು ಸಂಬಂಧಿಸಿದ ಸಾವುಗಳು ಚಳಿಗಾಲದ ಮಾಸಗಳಲ್ಲಿ ಹೆಚ್ಚಿರುತ್ತದೆ ಎಂದು ಅನೇಕ ಅಧ್ಯಯನಗಳು ಬಹಿರಂಗ ಮಾಡಿವೆ. ಚಳಿಗಾಲದಲ್ಲಿ ಇದರ ಪ್ರಮಾಣ ಶೇ. 50ರಷ್ಟು ಹೆಚ್ಚಿರುತ್ತದೆ. ಚಳಿಗಾಲದಲ್ಲಿ ಉಷ್ಣಾಂಶ ಕುಸಿಯುತ್ತಿದ್ದಂತೆ ದೇಹದೊಳಕ್ಕೆ ಉಷ್ಣಾಂಶವನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ.

ದೇಹದ ಆಂತರಿಕ ಉಷ್ಣಾಂಶದಲ್ಲಿ ಕುಸಿತವು ಹೃದಯಸಮಸ್ಯೆಗಳಿರುವ ಜನರಿಗೆ ಅಪಾಯಕಾರಿಯಾಗಿದ್ದು, ಶೀತದ ಹವಾಮಾನದಿಂದ ಎದೆನೋವು  ಕಾಣಿಸಿಕೊಳ್ಳುತ್ತದೆ. ಹೃದಯಬೇನೆಗಳ ಇತಿಹಾಸ ಹಿನ್ನೆಲೆಯಿರುವ ರೋಗಿಗಳಿಗೆ ಚಳಿಗಾಲ ಹೆಚ್ಚು ಅಪಾಯಕಾರಿಯಾಗಿರುತ್ತದೆ.

ವೈದ್ಯರ ಪ್ರಕಾರ, ಎದೆಯಲ್ಲಿ ತಳಮಳ, ತೀವ್ರ ಬೆವೆತ, ಕುತ್ತಿಗೆ, ದವಡೆ ಮತ್ತು ಭುಜಗಳಲ್ಲಿ ನೋವು, ಚಳಿಗಾಲದಲ್ಲಿ ಉಸಿರಾಟಕ್ಕೆ ತೊಂದರೆ ಹೃದಯ ವೈಫಲ್ಯದ ಲಕ್ಷಣಗಳು.

ಚಳಿಗಾಲದಲ್ಲಿ ರಕ್ತದೊತ್ತಡ ಏರಿಕೆ ಹೃದಯ ಸಂಬಂಧಿತ ಸಮಸ್ಯೆಗಳ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ರಕ್ತನಾಳಗಳು ಸಂಕುಚಿತವಾಗಿ ರಕ್ತವನ್ನು ಪಂಪ್ ಮಾಡಲು ಹೃದಯ ಹೆಚ್ಚು ಪ್ರಯತ್ನ ಮಾಡಬೇಕಾಗುತ್ತದೆ. ರಕ್ತದ ಹರಿವಿನಲ್ಲಿ ಕೆಲವು ಪ್ರೋಟೀನ್‌ಗಳ ಮಟ್ಟವು ಏರುವ ಪ್ರವೃತ್ತಿ ಚಳಿಗಾಲದಲ್ಲಿ ಇರುತ್ತದೆ. ಇದು ರಕ್ತಹೆಪ್ಪುಗಟ್ಟುವಿಕೆ ಅಪಾಯವನ್ನು ಹೆಚ್ಚಿಸುತ್ತದೆ. ಹೈಪೋಥರ್ಮಿಯಾದಿಂದ ಅನೇಕ ಹೃದಯಾಘಾತಗಳು ಸಂಭವಿಸುತ್ತದೆ. ಅಸಹಜವಾಗಿ ಕಡಿಮೆ ದೇಹದ ಉಷ್ಣಾಂಶದಿಂದ ಹೃದಯ ವೈಫಲ್ಯ ಹೈಪೋಥರ್ಮಿಯಾದಿಂದ ಸಂಭವಿಸುತ್ತದೆ.

Recent Comments

Leave Comments

footer
Top