• 20 March 2019 19:23
Jai Kannada
Jai Kannada
Blog single photo
December 30, 2018

ಮೆಲ್ಬರ್ನ್ ಟೆಸ್ಟ್ ಗೆದ್ದ ಭಾರತಕ್ಕೆ 2-1 ಮುನ್ನಡೆ 

ಮೆಲ್ಬರ್ನ್ : ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಸತತ ಮಳೆ, ಗುಡುಗು, ಮೋಡಗಳು ಕಣ್ಣಾಮುಚ್ಚಾಲೆ ಆಟವಾಡಿದವು. ಆದರೆ ಕೊನೆಗೆ ಅಂತಿಮ ದಿನದಾಟದಲ್ಲಿ ಭಾರತಕ್ಕೆ ಬೇಕಾಗಿದ್ದು ಕೇವಲ ಎರಡು ವಿಕೆಟ್‌ಗಳು. ಕೇವಲ 4.3 ಓವರುಗಳಲ್ಲಿ ಇನ್ನುಳಿದ ಎರಡು ವಿಕೆಟ್ ಉರುಳಿಸಿದ ಭಾರತೀಯ ಬೌಲರುಗಳು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾನುವಾರ 2-1ರ ಮುನ್ನಡೆಯನ್ನು ತಂದುಕೊಟ್ಟಿದ್ದಾರೆ. ಭಾನುವಾರ ಬಿದ್ದ ಸತತ ಮಳೆಯಿಂದ ಬೆಳಗಿನ ಆಟ ಕೊಚ್ಚಿಹೋಗಿತ್ತು.

ಲಂಚ್ ನಂತರವೇ ಆಟ ಶುರುವಾಗಿತ್ತು. 258ಕ್ಕೆ 8 ವಿಕೆಟ್ ಉರುಳಿದ್ದ ಆಸ್ಟ್ರೇಲಿಯಾ ಪರ ಪ್ಯಾಟ್ ಕಮ್ಮಿನ್ಸ್ ಮತ್ತು ನಾಥನ್ ಲಯನ್ ಅವರಿಗೆ ದೊಡ್ಡ ಪರ್ವತಾರೋಹಣ ಮಾಡುವಂತ ಸಾಹಸ ಅವರ ಮುಂದಿತ್ತು.

ಆದರೆ ಪಂದ್ಯಪುರುಷೋತ್ತಮರಾದ ಜಸ್ಪ್ರೀತ್ ಬುಮ್ರಾ ಸಮಯ ವ್ಯರ್ಥ ಮಾಡದೇ ತಮ್ಮ 8ನೇ ಎಸೆತದಲ್ಲಿ ಕಮ್ಮಿನ್ಸ್ ಬ್ಯಾಟಿನ ತುದಿಗೆ ಚೆಂಡು ತಾಗಿ ಮೊದಲ ಸ್ಲಿಪ್‌ನಲ್ಲಿದ್ದ ಪೂಜಾರಾ ಯಶಸ್ವಿಯಾಗಿ ಕ್ಯಾಚ್ ಹಿಡಿದರು. 5 ಬೌಂಡರಿಗಳು ಮತ್ತು ಒಂದು ಸಿಕ್ಸರ್‌ನೊಂದಿಗೆ ಕಮ್ಮಿನ್ಸ್ 63 ರನ್‌ಗಳ ಅತ್ಯಧಿಕ ಸ್ಕೋರರ್ ಆಗಿದ್ದರು. ಮುಂದಿನ ಓವರಿನಲ್ಲೇ ಇಶಾಂಶ್ ಶರ್ಮಾ ಲಯನ್ ಅವರನ್ನು ಔಟ್ ಮಾಡುವ ಮೂಲಕ ಆಸ್ಟ್ರೇಲಿಯ ಇನ್ನಿಂಗ್ಸ್‌ಗೆ ಅಂತಿಮ ಚರಣ ಹಾಡಿದರು. ಶಾರ್ಟ್ ಚೆಂಡೊಂದು ಲಯನ್ ಬ್ಯಾಟಿನ ತುದಿಗೆ ತಾಗಿ ನೇರವಾಗಿ ರಿಷಬ್ ಪಂತ್ ಅವರ ಕೈಸೇರಿತು.

ಆಸ್ಟ್ರೇಲಿಯಾ 261 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಭಾರತಕ್ಕೆ 137 ರನ್ ನಿರಾಯಾಸ ಜಯವನ್ನು ತಂದಿತ್ತರು.
ಈ ಜಯದಿಂದ ಅಂತಿಮ ಪಂದ್ಯದಲ್ಲಿ ಯಾವುದೇ ಫಲಿತಾಂಶ ಬಂದರೂ  ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಭಾರತ ತಂಡ ಉಳಿಸಿಕೊಂಡಿದೆ.

Recent Comments

Leave Comments

footer
Top