Jai Kannada
Jai Kannada
Blog single photo
December 28, 2018

ಮೆಲ್ಬರ್ನ್ ಟೆಸ್ಟ್‌ನಲ್ಲಿ ಗೆಲುವಿನ ಹೊಸ್ತಿಲಿನಲ್ಲಿ ಭಾರತ 

ಮೆಲ್ಬರ್ನ್: ಮೆಲ್ಬರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 443 ರನ್ ಬೃಹತ್ ಮೊತ್ತ ಗಳಿಸಿ ಡಿಕ್ಲೇರ್ ಮಾಡಿಕೊಂಡಿದ್ದ ಭಾರತ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 54 ರನ್ ಕಳೆದುಕೊಂಡು ಮುಗ್ಗರಿಸಿದೆ. ಭಾರತದ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಭಾರತದ ವೇಗಿ ಬುಮ್ರಾ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ 151 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ತೀವ್ರ ಹಿನ್ನಡೆ ಅನುಭವಿಸಿತ್ತು. ಆದರೆ ಭಾರತ ಕೂಡ ಎರಡನೇ ಇನ್ನಿಂಗ್ಸ್‌ನಲ್ಲಿ 54 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲ್ಲುವ ಅವಕಾಶದಿಂದ ವಂಚಿತವಾಗಿದೆ.

ಪ್ಯಾಟ್ ಕಮ್ಮಿನ್ಸ್ ಅವರು ಹನುಮಾನ್ ವಿಹಾರಿ(13). ಚೇತೇಶ್ವರ ಪೂಜಾರ(0), ವಿರಾಟ್ ಕೊಹ್ಲಿ(0) ಮತ್ತು ಅಜಿಂಕ್ಯ ರಹಾನೆ(1) ಅವರ ನಾಲ್ಕು ದೊಡ್ಡ ವಿಕೆಟ್‌ಗಳನ್ನು ಕಬಳಿಸಿದರು. ಹ್ಯಾಜಲ್‌ವುಡ್ ಅವರು ರೋಹಿತ್ ಶರ್ಮಾ ಅವರನ್ನು ಕೇವಲ 5 ರನ್ ಗಳಿಸುವಷ್ಟರಲ್ಲಿ ಔಟ್ ಮಾಡಿದರು. ಮೂರನೇ ದಿನದಾಟ ಮುಗಿದಾಗ ಭಾರತ ಇನ್ನೂ 346 ರನ್ ಮುನ್ನಡೆ ಕಾಯ್ದುಕೊಂಡಿದೆ.

 ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಪೂಜಾರ್ ಅವರ ನಿಧಾನಗತಿಯ, ಎಚ್ಚರಿಕೆಯ ಆಟದಿಂದಾಗಿ 106 ರನ್ ಶತಕ ಗಳಿಸಿದರು. ವಿರಾಟ್ ಕೊಹ್ಲಿ 82 ರನ್‌ಗಳೊಂದಿಗೆ ಸ್ಟಾರ್ಕ್ ಬೌಲಿಂಗ್‌ನಲ್ಲಿ ಫಿಂಚ್ ಅವರಿಗೆ ಕ್ಯಾಚಿತ್ತು ಶತಕ ವಂಚಿತರಾದರು. ಇನ್ನುಳಿದಂತೆ ಮಾಯಾಂಕ್ 76, ರೋಹಿತ್ ಶರ್ಮಾ 63 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಲಂಚ್‌ವರೆಗೆ ಇನ್ನಷ್ಟು ರನ್ ಕಲೆಹಾಕಿ ಆಸ್ಟ್ರೇಲಿಯಾಗೆ ಉತ್ತಮ ಸವಾಲು ಒಡ್ಡಿದರೆ ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಸುಲಭವಾಗಿ ದಕ್ಕಬಹುದು.;

ಸ್ಕೋರು ವಿವರ
ಭಾರತ ಮೊದಲ ಇನ್ನಿಂಗ್ಸ್ 443ಕ್ಕೆ 7 ಡಿಕ್ಲೇರ್ಡ್
ಮಾಯಾಂಕ್ ಅಗರವಾಲ್ 76, ಪೂಜಾರ್ 106, ವಿರಾಟ್ ಕೊಹ್ಲಿ 82, ರೋಹಿತ್ ಶರ್ಮಾ 63.

ಕಮಿನ್ಸ್ 3 ವಿಕೆಟ್,   ಮಿಚೆಲ್ ಸ್ಟಾರ್ಕ್ 2 ವಿಕೆಟ್.

 ವಿಕೆಟ್ ಪತನ- 40/1, 123/2, 293/3, 299/4, 361/5, 437/6 443/7.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್
151ಕ್ಕೆ ಆಲೌಟ್
ಕ್ವಾಜಾ 21 ರನ್, ಟ್ರಾವಿಸ್ ಹೆಡ್ 20 ರನ್, ಟಿಮ್ ಪೈನ್ 22 ರನ್.
ಜಸ್‌ಪ್ರೀತ್ ಬುಮ್ರಾ 6 ವಿಕೆಟ್, ರವೀಂದ್ರ ಜಡೇಜಾ 2 ವಿಕೆಟ್ 
ಭಾರತ ಎರಡನೇ ಇನ್ನಿಂಗ್ಸ್
54ಕ್ಕೆ 5 ವಿಕೆಟ್
ಮಾಯಾಂಕ್ ಅಗರವಾಲ್ 28, ಕೊಹ್ಲಿ 0, ಪೂಜಾರಾ 0 
 ಪ್ಯಾಟ್ ಕಮ್ಮಿನ್ಸ್ 4 ವಿಕೆಟ್

.

Recent Comments

Leave Comments

footer
Top