• 19 April 2019 20:01
Jai Kannada
Jai Kannada
Blog single photo
November 25, 2018

ಕಾಂಗ್ರೆಸ್ ಹಿರಿಯ ನೇತಾರ ಜಾಫರ್ ಶರೀಫ್ ಇನ್ನಿಲ್ಲ

.
ಬೆಂಗಳೂರು: ಕಾಂಗ್ರೆಸ್ ಪಕ್ಷದ ಮುಖಂಡ, ಕನ್ನಡ ಚಿತ್ರರಂಗದ ಶ್ರೇಷ್ಟ ನಟ ಅಂಬರೀಶ್ ನಿಧನದ ಸುದ್ದಿಯಿಂದ ಕಾಂಗ್ರೆಸ್ ಚೇತರಿಸಿಕೊಳ್ಳುವಷ್ಟರಲ್ಲೇ ಕಾಂಗ್ರೆಸ್ ಹಿರಿಯ ನೇತಾರ ಜಾಫರ್ ಶರೀಫ್ ನಿಧನರಾಗಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಒಂದರ ಹಿಂದೊಂದು ತುಂಬಲಾಗದ ನಷ್ಟ ಉಂಟಾಗಿದೆ.

 ಮಾಜಿ ರೈಲ್ವೆ ಸಚಿವ ಸಿ.ಕೆ. ಜಾಫರ್ ಶರೀಪ್ ಅಲ್ಪಕಾಲದ ಅಸ್ವಸ್ಥತೆ ಬಳಿಕ ಭಾನುವಾರ ಮಧ್ಯಾಹ್ನ ನಿಧನರಾದರು.  ಅವರಿಗೆ 87 ವರ್ಷ ವಯಸ್ಸಾಗಿತ್ತು.

ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ.  ಏಳು ಬಾರಿ ಲೋಕಸಭೆಗೆ ಪ್ರತಿನಿಧಿಸಿದ ಶರೀಫ್ ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮ್ಮ ವೃತ್ತಿಜೀವನ ಪ್ರವೇಶಿಸಿದರು. ಕೇಂದ್ರ ರೈಲ್ವೆ ಸಚಿವರಾಗಿ ದೇಶಾದ್ಯಂತ  ಬ್ರಾಡ್ ಗೇಜ್ ಪರಿವರ್ತನೆಗೆ ಮತ್ತು ಕರ್ನಾಟಕದಲ್ಲಿ ರೈಲ್ವೆ ಜಾಲದ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಿದರು

. ಬೆಂಗಳೂರಿನಲ್ಲಿ ವೀಲ್ ಆ್ಯಂಡ್ ಆಕ್ಸಲ್ ಘಟಕ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದರು. ಜಾಫರ್ ಶರೀಫ್ ನಿಧನಕ್ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಅನೇಕ ಗಣ್ಯರು ಸಂತಾಪ ಸೂಚಿಸಿದರು. 

Recent Comments

Leave Comments

footer
Top