• 17 December 2018 01:15
Jai Kannada
Jai Kannada
Blog single photo
November 12, 2018

ಬಿಜೆಪಿ ಹಿರಿಯ ಮುಖಂಡ ಅನಂತ ಕುಮಾರ್ ವಿಧಿವಶ 

 ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಮತ್ತು ಕ್ಯಾಬಿನೆಟ್ ಸಚಿವ ಅನಂತಕುಮಾರ್ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. 59 ವರ್ಷಗಳಾಗಿದ್ದ ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ನ್ಯೂಯಾರ್ಕ್ ಕ್ಯಾನ್ಸರ್ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಕಳೆದ ತಿಂಗಳು ಅಮೆರಿಕದಿಂದ ವಾಪಸಾಗಿದ್ದರು.

ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಮತ್ತು ಅವರ ಇಬ್ಬರು ಪುತ್ರರು ಅನಂತಕುಮಾರ್ ಸಾವಿನ ಕೊನೆಯ ಕ್ಷಣಗಳಲ್ಲಿ ಅವರ ಪಕ್ಕದಲ್ಲೇ ಇದ್ದರು. ಅವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಲು ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತದೆ.

 ಅನಂತಕುಮಾರ್ ಆರು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿ ಬೆಂಗಳುೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅನಂತಕುಮಾರ್ ಅಟರ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ವಾಸ್ತವವಾಗಿ ಅವರು 1998ರಲ್ಲಿ ವಾಜಪೇಯಿ ಕ್ಯಾಬಿನೆಟ್‌ನಲ್ಲಿ ಅತೀ ಕಿರಿಯ ಸಚಿವರಾಗಿ ನಾಗರಿಕ ವಿಮಾನ ಯಾನ ಸಚಿವ, ಪ್ರವಾಸೋದ್ಯಮ, ಕ್ರೀಡೆ, ಯುವಜನ ವ್ಯವಹಾರ ಮತ್ತು ಸಂಸ್ಕೃತಿ, ನಗರಾಭಿವೃದ್ಧಿ ಮತ್ತು ಬಡತನ ನಿವಾರಣೆ ಮುಂತಾದ ವಿವಿಧ ಖಾತೆಗಳನ್ನು ನಿರ್ವಹಿಸಿದ್ದರು.
ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಪ್ರಥಮ ವ್ಯಕ್ತಿ ಅನಂತಕುಮಾರ್ ಎಂದು ನೆನಪಿಸಿಕೊಳ್ಳಬಹುದು. 

 ಅನಂತಕುಮಾರ್ ನಿಧನಕ್ಕೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಇದು ನಮ್ಮ ರಾಷ್ಟ್ರದ ಸಾರ್ವಜನಿಕ ಜೀವನಕ್ಕೆ ಅಪಾರ ನಷ್ಟವುಂಟುಮಾಡಿದೆ. ವಿಶೇಷವಾಗಿ ಕರ್ನಾಟಕದ ಜನರಿಗೆ ಉಂಟಾದ ನಷ್ಟವಿದು. ಅವರ ಕುಟುಂಬ, ಸಹೋದ್ಯೋಗಿಗಳಿಗೆ ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನಾನು ಸಂತಾಪ ಸೂಚಿಸುವುದಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೂಡ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಅನಂತಕುಮಾರ್ ಜೀ ಗಮನಾರ್ಹ ನಾಯಕರಾಗಿದ್ದು, ಯುವಕರಾಗಿದ್ದಾಗಲೇ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿ ಅತ್ಯಂತ ನಿಷ್ಠೆಯಿಂದ ಸಮಾಜಕ್ಕೆ ಸೇವೆಸಲ್ಲಿಸಿದ್ದಾರೆ. ಅವರ ಉತ್ತಮ ಕೆಲಸಕ್ಕಾಗಿ ಸದಾ ಸ್ಮರಣೀಯರು ಎಂದಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಸಂತಾಪ ಸೂಚಿಸಿ, ರಾಜಕಾರಣಿಯಾಗಿ ಅವರು ದೇಶಕ್ಕೆ ಗಮನಾರ್ಹ ಕೊಡುಗೆ ನೀಡಿದ್ದು, ಅವರು  ಬೆಂಗಳೂರಿಗರಲ್ಲಿ ಜನಪ್ರಿಯವಾಗಿದೆ. ಅವರ ನಿಧನದಿಂದ ಉತ್ತಮ ಸ್ನೇಹಿತನನ್ನು ಕಳೆದುಕೊಂಡೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ಕಲೆ ಮತ್ತು ಕಾನೂನು ಪದವೀಧರರಾಗಿದ್ದ ಅನಂತಕುಮಾರ್ ಬಿಜೆಪಿಗೆ ಸೇರುವ ಮುಂಚೆ ಎಬಿವಿಪಿ ಜತೆ ಗುರುತಿಸಿಕೊಂಡಿದ್ದರು.
 2014ರ ಮೇ ನಿಂದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿ ಮತ್ತು 2016ರ ಜುಲೈನಿಂದ  ಸಂಸದೀಯ ವ್ಯವಹಾರ ಸಚಿವರಾಗಿ ನರೇಂದ್ರ ಮೋದಿ ಸರ್ಕಾರದಲ್ಲಿ ಸೇವೆ ಸಲ್ಲಿಸಿದ್ದರು.

Recent Comments

Leave Comments

footer
Top