• 19 November 2018 06:22
Jai Kannada
Jai Kannada
Blog single photo
October 17, 2018

ಪಾನೀಯದಲ್ಲಿ ವಿಷ: ಹೊಟೆಲ್ ಮಾಲೀಕ ಸಾವು 

ಕುಂದಾಪುರ: ಬೈಲಹೊಂಗಲದಲ್ಲಿ ಹೊಟೆಲ್ ನಡೆಸುತ್ತಿದ್ದ ಕುಂದಾಪುರ ಮೂಲದ ಚಂದ್ರಶೇಖರ್ ಶೆಟ್ಟಿ ಎಂಬವರನ್ನು ಮೃದುಪಾನೀಯದಲ್ಲಿ ವಿಷ ಬೆರೆಸಿ ಕುಡಿಸಿ ದುಷ್ಕರ್ಮಿಗಳು ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. 
ಇದೂರು-ಕುನ್ಹಾಡಿಯ ನಿವಾಸಿಯಾದ ಚಂದ್ರಶೇಖರ್ ಶೆಟ್ಟಿ ಮೊದಲಿಗೆ ಪಾನ್ ಮಾರಾಟ ಮಾಡುವ ಸಣ್ಣ ಅಂಗಡಿ ಇಟ್ಟುಕೊಂಡಿದ್ದರು. ಬಳಿಕ ಕರಾವಳಿ ಎಂಬ ಹೆಸರಿನ ಸಸ್ಯಾಹಾರಿ ಹೊಟೆಲ್ ಅನ್ನು ಸಹೋದರರ ಜತೆ ಆರಂಭಿಸಿದರು.

ಕಳೆದ ಅಕ್ಟೋಬರ್ 6ರಂದು ಅಪರಿಚಿತರೊಬ್ಬರು ಟೀ ಕುಡಿಯಲು ಹೊಟೆಲ್‌ಗೆ ಆಗಮಿಸಿದ್ದರು. ಸಂಗೊಳ್ಳಿ ಬಾಬಾ ಡಾಬಾಗೆ ಬಂದರೆ ಹೊಟೆಲ್‌ಗೆ ಕಾರ್ಮಿಕರನ್ನು ಒದಗಿಸುವುದಾಗಿ ಅವರು ಶೆಟ್ಟಿಗೆ ಆಶ್ವಾಸನೆ ನೀಡಿದಂತೆ ಚಂದ್ರಶೇಖರ್ ಡಾಬಾಗೆ ಹೋಗಿದ್ದರು.

ಡಾಬಾದಲ್ಲಿ ಅಪರಿಚಿತನ ಸ್ನೇಹಿತರು ವಿಷ ಬೆರೆಸಿದ ಮೃದುಪಾನೀಯವನ್ನು ಬಲವಂತವಾಗಿ ಕುಡಿಸಿದರು. ಶೆಟ್ಟಿ ತಮ್ಮ ಮೋಟರ್ ಬೈಕಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ತುಂಬಾ ದುರ್ಬಲರಾಗಿದ್ದರಿಂದ ಸೇತುವೆಯ ಬಳಿ ಕೆಳಕ್ಕೆ ಬಿದ್ದಿದ್ದರು.  ಬಳಿಕ ಅವರ ಸೋದರ ನಾಗರಾಜ್ ಬೈಲಹೊಂಗಲ ಆಸ್ಪತ್ರೆಗೆ ಸೇರಿಸಿದ ಐದು ದಿನಗಳ ಬಳಿಕ ಚಂದ್ರಶೇಖರ್ ಶೆಟ್ಟಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಅವರ ಅಂತಿಮ ಸಂಸ್ಕಾರವನ್ನು ಅವರ ಊರಿನಲ್ಲಿ ನೆರವೇರಿಸಲಾಯಿತು.

Recent Comments

Leave Comments

footer
Top