• 19 November 2018 06:22
Jai Kannada
Jai Kannada
Blog single photo
October 17, 2018

ನಕಲಿ ಅಂಕಪಟ್ಟಿ: ರೈತ ಸಂಘದ  ಗಿರೀಶ್ ಗೌಡ ಬಂಧನ 

ಬೆಂಗಳೂರು: ಬೆಂಗಳೂರಿನಲ್ಲಿ ನಕಲಿ ಅಂಕಪಟ್ಟಿಗೆ ಸಂಬಂಧಿಸಿದಂತೆ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಗೌಡ ಎಂಬವರನ್ನು ಬಂಧಿಸಲಾಗಿದೆ.

ವರ್ಷಾ ಎಜುಕೇಷನ್ ಇನ್‌ಸ್ಟಿಸ್ಟ್ಯೂಟ್ ಹೆಸರಿನಲ್ಲಿ ಗಿರೀಶ್ ಗೌಡ ವಂಚಿಸುತ್ತಿದ್ದರೆಂದು ಆರೋಪಿಸಲಾಗಿದೆ. ತಿಮ್ಮರಾಮ ಎಂಬವರ ಮಗಳಿಗೆ ನಕಲಿ ಅಂಕಪಟ್ಟಿಯನ್ನು ನೀಡಿದ್ದರೆಂದು ಆರೋಪಿಸಲಾಗಿದೆ. ಕಾಮಾಕ್ಷಿಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದರು.

ಕರ್ನಾಟಕ ರಾಜ್ಯ ಮುಕ್ತ ವಿವಿ ಹೆಸರಿನಲ್ಲಿ ಕೊಟ್ಟಿಗೆಪಾಳ್ಯದ ಬಳಿ ಈ ತರಬೇತಿ ಕೇಂದ್ರವನ್ನು ಅವರು ತೆರೆದಿದ್ದರೆಂದು ಆರೋಪಿಸಲಾಗಿದೆ. ತಿಮ್ಮರಾಯ ಅವರು ತಮ್ಮ ಪುತ್ರಿಯನ್ನು ಬಿಎ ಅಡ್ಮಿಶನ್ ಮಾಡಿಸಲು ಹೋದಾಗ ನಕಲಿ ಮಾರ್ಕ್ಸ್‌ಕಾರ್ಡ್ ನೀಡಿರುವುದು ಬೆಳಕಿಗೆ ಬಂದಿದೆ. 

Recent Comments

Leave Comments

footer
Top