• 17 December 2018 12:54
Jai Kannada
Jai Kannada
Blog single photo
October 14, 2018

 ಕುಟುಂಬಕ್ಕೆ ರಕ್ಷಣೆ ನೀಡುತ್ತಿದ್ದ ಭದ್ರತಾ ಅಧಿಕಾರಿಯಿಂದ ಜಡ್ಜ್ ಪತ್ನಿ, ಪುತ್ರನಿಗೆ ಗುಂಡೇಟು

 ಗುರುಗಾಂವ್: ನ್ಯಾಯಾಧೀಶರು ಮತ್ತು ಅವರ ಕುಟುಂಬಕ್ಕೆ ಭದ್ರತೆ ನೀಡುತ್ತಿದ್ದ ಭದ್ರತಾ ಅಧಿಕಾರಿಯೇ ನ್ಯಾಯಾಧೀಶರ ಪತ್ನಿ ಮತ್ತು ಪುತ್ರನ ಮೇಲೆ ತನ್ನ ರಿವಾಲ್ವರ್‌ನಿಂದ ಗುಂಡು ಹಾರಿಸಿದ ಭೀಕರ ಘಟನೆ ಗುರ್‌ಗಾಂವ್‌ನಲ್ಲಿ ಸಂಭವಿಸಿದೆ. ಹೆಡ್ ಕಾನ್‌ಸ್ಟೇಬರ್ ಮಹಿಪಾಲ್ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕೃಷ್ಣಕಾಂತ್ ಪತ್ನಿ ರೀತು ಮತ್ತು ಪುತ್ರ ದ್ರುವ್ ಅವರ ಮೇಲೆ ಸಮೀಪದಿಂದಲೇ ತನ್ನ ಸರ್ವಿಸ್ ರಿವಾಲ್ವರ್‌ನಿಂದ ಗುಂಡುಹಾರಿಸಿದ.

ರೀತುನ ಎದೆ ಮತ್ತು ಹೊಟ್ಟೆಗೆ ಅವನು ಮೂರು ಗುಂಡುಗಳನ್ನು ಹಾರಿಸಿದ್ದ. ದ್ರುವನ ಭುಜಕ್ಕೆ ಒಂದು ಗುಂಡು ಮತ್ತು ತಲೆಗೆ ಎರಡು ಗುಂಡು ಹಾರಿಸಿದ್ದ. ಶನಿವಾರ ಸಂಜೆ 4.45ಕ್ಕೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕೃಷ್ಣನ್ ಕಾಂತ್ ಗುರ್‌ಗಾಂವ್ ಜಿಲ್ಲಾ ಕೋರ್ಟ್‌ನಲ್ಲಿ ಇನ್ನೊಬ್ಬರು ನ್ಯಾಯಾಧೀಶರ ಜತೆ ಮೀಟಿಂಗ್ ಮಾಡುತ್ತಿದ್ದಾಗ ಅವರ ಸೆಲ್ ಫೋನ್ ರಿಂಗಣಿಸಿತು.

ಆರೋಪಿ ಭದ್ರತಾ ಅಧಿಕಾರಿಯೇ ಕರೆ ಮಾಡಿ ನಿಮ್ಮ ಪತ್ನಿ, ಪುತ್ರನ ಮೇಲೆ ಗುಂಡುಹಾರಿಸಿದ್ದೇನೆ. ಹೋಗಿ ನೋಡಿ ಎಂದು ಹೇಳಿದಾಗ ನ್ಯಾಯಾಧೀಶರಿಗೆ ಶಾಕ್ ಆಗಿತ್ತು. ಆರ್ಕಾಡಿಯಾ ಮಾರುಕಟ್ಟೆಯಲ್ಲಿ ನೂರಾರು ಜನ ದಾರಿಹೋಕರ ಕಣ್ಮುಂದೆಯೇ ಈ ಭಯಾನಕ ಘಟನೆ ನಡೆದುಹೋಗಿತ್ತು. ಜನರು ಭಯದಿಂದ ಕಿರುಚುತ್ತಿದ್ದಂತೆ ಮಹಿಪಾಲ್ ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದು ರಕ್ತಸ್ರಾವವಾಗಿದ್ದ ನ್ಯಾಯಾಧೀಶರ ಪುತ್ರನನ್ನು ಕಾರಿನ ಹಿಂದಿನ ಸೀಟಿಗೆ ಎಳೆಯಲು ಯತ್ನಿಸಿ ಎರಡು ಬಾರಿ ವಿಫಲಗೊಂಡ ಬಳಿಕ ಅಲ್ಲೇ ಬಿಟ್ಟು ತೆರಳಿದ್ದ.

ಮಹಿಪಾಲ್ ಹೋದ ಮೇಲೆ ಗುಂಪಿನಲ್ಲಿದ್ದ ಕೆಲವು ಜನರು ರಕ್ತ ಸೋರುತ್ತಿದ್ದ ಧ್ರುವನ ತಲೆಗೆ ಬಟ್ಟೆಯಿಂದ ಸುತ್ತಿದರು. ಅವನನ್ನು ಮತ್ತು ರೀಟುವನ್ನು ಸಮೀಪದ ಪಾರ್ಕ್ ಆಸ್ಪತ್ರೆಗೆ ಒಯ್ದರು.  ಮಹಿಪಾಲ್‌ನನ್ನು ಕಳೆದ ಎರಡು ವರ್ಷದಿಂದ ನ್ಯಾಯಾಧೀಶರು ಮತ್ತು ಅವರ ಕುಟುಂಬದ ರಕ್ಷಣೆ ಉಸ್ತುವಾರಿಗೆ ನೇಮಿಸಲಾಗಿತ್ತು.

ಆರೋಪಿಯು ಮಾನಸಿಕವಾಗಿ ಅಸ್ವಸ್ಥನಂತೆ ಕಂಡುಬಂದಿದ್ದ. ತನಿಖೆ ವೇಳೆ ಮತ್ತೆ ಮತ್ತೆ ಹೇಳಿದ್ದನ್ನೇ ಹೇಳುತ್ತಿದ್ದ. ತನಿಖೆದಾರರಿಗೆ ಅವನ ಹೇಳಿಕೆ ನಂಬಲಸಾಧ್ಯವಾಗಿತ್ತು. ಮಹಿಪಾಲ್ ಖಿನ್ನತೆಯಿಂದ ಬಳಲುತ್ತಿದ್ದು ಕೆಲವು ಮಾನಸಿಕ ಸಮಸ್ಯೆಗಳಿರುವಂತೆ ಕಾಣುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Recent Comments

Leave Comments

footer
Top