• 17 December 2018 02:24
Jai Kannada
Jai Kannada
Blog single photo
October 12, 2018

ಬಳ್ಳಾರಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಜಿ.ಪಂ. ಸದಸ್ಯರು ಗರಂ 

ಬಳ್ಳಾರಿ: ಬಳ್ಳಾರಿ ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ  ಜಿಲ್ಲಾ ಪಂಚಾಯತ್ ಸದಸ್ಯರ ಮಾತನ್ನು ಆಲಿಸುತ್ತಿಲ್ಲ. ಶಾಸಕರ ಅಭಿಪ್ರಾಯ ಮಾತ್ರ ಪಡೆದಿದ್ದಕ್ಕೆ ವರಿಷ್ಠರ ಮೇಲೆ ಜಿ.ಪಂ. ಸದಸ್ಯರು ಗರಂ ಆಗಿದ್ದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

18 ಜಯ.ಪಂ. ಸದಸ್ಯರಿರುವ ನಮ್ಮ ಅಭಿಪ್ರಾಯಕ್ಕೆ ಬೆಲೆಯಿಲ್ಲವೇ  ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಿ.ಕೆ.ಶಿವಕುಮಾರ್ ಅವರಿಗೆ ಬಳ್ಳಾರಿ ಜಿಲ್ಲೆ ಉಸ್ತುವಾರಿ ವಹಿಸಿದ್ದಕ್ಕೆ ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಶಾಸಕ ನಾಗೇಂದ್ರ ಸಹೋದರ ಪ್ರಸಾದ್, ಕೂಡ್ಲಿಗಿಯ ನಾಗಮಣಿ, ಮಾಜಿ ಪರಿಷತ್ ಸದಸ್ಯ ಕೆಎಸ್‌ಎಲ್ ಸ್ವಾಮಿ ಪತ್ನಿ ಸರಸ್ವತಿ, ಮಾಜಿ.ಜಿ.ಪಂ. ಅಧ್ಯಕ್ಷ ನೆಟ್ಟಕಲ್ಲಪ್ಪ ಹೆಸರುಗಳು ಅಭ್ಯರ್ಥಿ ಆಯ್ಕೆಗೆ ಕೇಳಿಬರುತ್ತಿದೆ. ಆದರೆ ತಮ್ಮ ಅಭಿಪ್ರಾಯ ಕೇಳದೇ ಬಳ್ಳಾರಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಿರುವುದು ಜಿಪಂ ಸದಸ್ಯರಿಗೆ ಸಿಟ್ಟು ತರಿಸಿದೆ. ಬಳ್ಳಾರಿ ಬಿಜೆಪಿ ಅಭ್ಯರ್ಥಿಯಾಗಿ ಶಾಂತಕುಮಾರಿ ಈಗಾಗಲೇ ಕಣಕ್ಕಿಳಿದಿದ್ದಾರೆ.

Recent Comments

Leave Comments

footer
Top