• 17 December 2018 01:16
Jai Kannada
Jai Kannada
Blog single photo
October 12, 2018

ಮಹೇಶ್ ರಾಜೀನಾಮೆ  ವಾಪಸಿಗೆ  ಕ್ಷೇತ್ರದ ಮತದಾರರ ಆಗ್ರಹ 

ಬೆಂಗಳೂರು: ಸಚಿವ ಸಂಪುಟಕ್ಕೆ ಎನ್. ಮಹೇಶ್ ನೀಡಿದ್ದ ರಾಜೀನಾಮೆಯನ್ನು ಕೂಡಲೇ ವಾಪಸ್ ಪಡೆಯುವಂತೆ ಕೊಳ್ಳೆಗಾಲ ಕ್ಷೇತ್ರದ ಮತದಾರರೇ ಆಗ್ರಹಿಸಿದ್ದಾರೆ.  ಸಂತೇಮರಳ್ಳಿ, ಬಾಗಳ್ಳಿ, ಹೊನ್ನೂರಿನ ಗ್ರಾಮಸ್ಥರು ಈ ಆಗ್ರಹ ಮಾಡಿದ್ದಾರೆ.

ಏನೇ ಭಿನ್ನಾಭಿಪ್ರಾಯವಿದ್ದರೂ ರಾಜೀನಾಮೆ ನೀಡಬಾರದಿತ್ತು. ಅವರಿಂದ ಕ್ಷೇತ್ರದ ಅಭಿವೃದ್ಧಿ ನಿರೀಕ್ಷಿಸಲಾಗಿತ್ತು. ಆದರೆ ಈಗ ಹೆಚ್ಚಿನ ಫಂಡ್ ತರಿಸಿಕೊಳ್ಳುವ ಅವಕಾಶ ತಪ್ಪಿಹೋಗುತ್ತಿದೆ ಎಂದು ಹೇಳಿದ್ದಾರೆ. 

ಮಹೇಶ್ ರಾಜೀನಾಮೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜಿ.ಟಿ.ದೇವೇಗೌಡ ನಾನು ಅವರನ್ನು ಮನವೊಲಿಸುವ ಕೆಲಸ ಮಾಡುತ್ತಿದ್ದೇನೆ. ಆದರೆ ನಮ್ಮ ಫೋನ್ ಕರೆಗಳನ್ನು ಮಹೇಶ್ ಸ್ವೀಕರಿಸುತ್ತಿಲ್ಲ ಎಂದು ಹೇಳಿದ್ದಾರೆ. ಮಹೇಶ್ ರಾಜೀನಾಮೆ ನೀಡಿದ್ದು ಅವರ ಪಕ್ಷಕ್ಕೆ ಸೇರಿದ ವಿಚಾರ ಎಂದು ಜಿ.ಟಿ. ದೇವೇಗೌಡ ಹೇಳಿದರು. 
 

Recent Comments

Leave Comments

footer
Top