• 19 November 2018 14:47
Jai Kannada
Jai Kannada
Blog single photo
October 06, 2018

ವಿದ್ಯಾರ್ಥಿನಿಯರ ಲೈಂಗಿಕ ದುರ್ಬಳಕೆ: ಶಿಕ್ಷಕನ ಬಂಧನ 

ಕಲಬುರ್ಗಿ: ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಕರೊಬ್ಬರನ್ನು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ರಾಜ್ಯ ಬಾಲಕಿಯರ ಗೃಹದಲ್ಲಿ ವಾಸವಿದ್ದ ನಾಲ್ವರು ಅನಾಥ ಬಾಲಕಿಯರ ಮೇಲೆ ಲೈಂಗಿಕ ದುರ್ಬಳಕೆ ಮತ್ತು ದೌರ್ಜನ್ಯ ನಡೆಸಿದ್ದಾನೆ ಎಂದು ಕಲ್ಬುರ್ಗಿ ಎಸ್ಪಿ ಶಶಿಕುಮಾರ್ ತಿಳಿಸಿದ್ದಾರೆ.

ಬಾಲಕಿಯರ ಗೃಹದಲ್ಲಿ ವಾಸವಿದ್ದ ಹೆಣ್ಣುಮಕ್ಕಳ ಮೇಲೆ ಆರೋಪಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಇದರಿಂದ ಕುಟುಂಬಗಳ ಜತೆ ವಾಸವಿದ್ದ ಬಾಲಕಿಯರು ದೂರು ನೀಡುವ ರೀತಿಯಲ್ಲಿ ಬಾಲ ಗೃಹದಲ್ಲಿ ವಾಸವಿದ್ದ ಬಾಲಕಿಯರು ದೂರು ನೀಡುವ ಸಂಭವ ಕಡಿಮೆಯಿತ್ತು.

ಇದರಿಂದ ಆರೋಪಿ ಅವರ ಮೇಲೆ ಲೈಂಗಿಕ ದೌರ್ಜನ್ಯವನ್ನು ಅವ್ಯಾಹತವಾಗಿ ನಡೆಸಲು ಸಹಾಯವಾಗಿತ್ತು. ಬಸವರಾಜ್ ಪ್ರಸಕ್ತ ತನಿಖೆಗೆ ಒಳಗೊಂಡಿದ್ದು, ಅದು ಮುಗಿದ ಕೂಡ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ. 

Recent Comments

Leave Comments

footer
Top