ಬೆಂಗಳೂರು: ನಿವೃತ್ತ ಡಿವೈಎಸ್ಪಿ ಕೋನರೆಡ್ಡಿ ಪುತ್ರ ಸುಮನ್ ಯುವರಾಜ್ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಆರೋಪ ಕೇಳಿಬಂದಿದ್ದು, ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಯುವರಾಜ್ ಎಂಬವ ತನ್ನ ಸ್ನೇಹಿತರೊಂದಿಗೆ ರಿನೈಸಾನ್ಸ್ ಪಂಚತಾರಾ ಹೊಟೆಲ್ನಲ್ಲಿ ಡಿಸ್ಕೊಥೆಕ್ಗೆ ಬಂದಿದ್ದಾಗ ನಿವೃತ್ತ ಡಿವೈಎಸ್ಸಿಪಿ ಪುತ್ರ ಸುಮನ್ ಮತ್ತು ಅವರ ಗ್ಯಾಂಗ್ ಬಾಟಲ್ಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿತ್ತು ಎಂದು ಆರೋಪಿಸಲಾಗಿದೆ.
ಊಟ ಮುಗಿಸಿ ಕೈತೊಳೆಯಲು ಯುವರಾಜ್ ಹೋಗಿದ್ದಾಗ ಸುಮನ್ಗೆ ಕೈತಾಗಿತ್ತು. ಇದರಿಂದ ಸುಮನ್ ಮತ್ತು ಅವನ ಗ್ಯಾಂಗ್ ಅವಾಚ್ಯವಾಗಿ ನಿಂದಿಸಿ ಬೀರ್ ಬಾಟಲ್ಗಳಿಂದ ಹಲ್ಲೆ ಮಾಡಿದ್ದರಿಂದ ಯುವರಾಜ್ ಅವರಿಗೆ ತೀವ್ರ ಗಾಯಗಳಾಗಿತ್ತು.
ಸುಮನ್ ಮತ್ತು ಅವನ ಸಹಚರರಾದ ಅಶೋಕ್, ಹರಿಕೃಷ್ಣ ಹಾಗೂ ವಿಕ್ರಮ್ ತಲೆಮರೆಸಿಕೊಂಡಿದ್ದು, ಪೊಲೀಸರು ಅವರನ್ನು ಪತ್ತೆ ಮಾಡಲು ಬಲೆ ಬೀಸಿದ್ದಾರೆ. ಯುವರಾಜ್ ಐದು ದಿನಗಳ ಕಾಲ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Recent Comments