• 18 October 2018 19:15
Jai Kannada
Jai Kannada
Blog single photo
October 05, 2018

ಕಿಸ್ಸಿಂಗ್ ದೃಶ್ಯದಿಂದ ರಕ್ಷಿತ್, ರಶ್ಮಿಕಾ ಸಂಬಂಧಕ್ಕೆ ಬ್ರೇಕ್ ಬಿತ್ತಾ?

 ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರದ ನಂತರ ರಶ್ಮಿಕ್ ಮತ್ತು ರಕ್ಷಿತ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಈ ಜೋಡಿಯ ಸಂಬಂಧ ಮುರಿದುಬಿದ್ದಿದೆಯೆಂದು ಹೇಳಲಾಗುತ್ತಿದೆ. ಗೀತಾಗೋವಿಂದಂ ಚಿತ್ರದಲ್ಲಿ ರಶ್ಮಿಕಾ ಅಭಿನಯಿಸಿದ ಕಿಸ್ಸಿಂಗ್  ದೃಶ್ಯವು ಇವರಿಬ್ಬರ ನಡುವೆ ಅಗಲಿಕೆಗೆ ಕಾರಣವೆಂದು ಹೇಳಲಾಗುತ್ತಿದೆ.

ವಿಜಯ ದೇವರಕೊಂಡ ಜತೆ ರಶ್ಮಿಕಾ ಕಿಸ್ಸಿಂಗ್ ದೃಶ್ಯದಲ್ಲಿ ಪಾಲ್ಗೊಂಡಿದ್ದು, ರಕ್ಷಿತ್ ಅಭಿಮಾನಿಗಳನ್ನು ಕೂಡ ಕೆರಳಿಸಿತ್ತು. ರಶ್ಮಿಕಾ ಮಂದಣ್ಣ ಮತ್ತು ವಿಜಯದೇವರ ಕೊಂಡ ಅಭಿನಯದ ಟೀಸರ್ ಮತ್ತು ಹಾಡುಗಳು ಬಿಡುಗಡೆಗೊಂಡು ಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡುತ್ತಿತ್ತು.

ಅದೇ ಸಿನಿಮಾದ ಕಿಸ್ಸಿಂಗ್ ಸೀನ್ ಲೀಕ್ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತಲ್ಲದೇ ಅವರಿಬ್ಬರ ನಡುವೆ ಚಿತ್ರದಲ್ಲಿರುವ ರೊಮ್ಯಾಂಟಿಕ್ ದೃಶ್ಯಗಳು ರಕ್ಷಿತ್ ಅಭಿಮಾನಿಗಳನ್ನು ಕೆರಳಿಸಿತ್ತಲ್ಲದೇ ರಶ್ಮಿಕಾ ಅವರ ವಿರುದ್ಧ ನಾನಾ ರೀತಿಯ ಕಮೆಂಟ್ ಮಾಡುತ್ತಿದ್ದರು. ಇವೆಲ್ಲವುಗಳಿಂದ ನೊಂದ ರಕ್ಷಿತ್ , ರಶ್ಮಿಕ್ ಜತೆ ಸಂಬಂಧ ಮುರಿದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. 

Recent Comments

Leave Comments

footer
Top