• 14 December 2018 13:21
Jai Kannada
Jai Kannada
Blog single photo
October 04, 2018

 ಪೆಟ್ರೋಲ್, ಡೀಸೆಲ್ ದರ ಲೀಟರ್‌ಗೆ ತಲಾ 2.50 ರೂ.ಕಡಿತ 

ನವದೆಹಲಿ: ಪೆಟ್ರೋಲ್,  ಡೀಸೆಲ್ ದರ ಲೀಟರ್‌ಗೆ  ತಲಾ 2.50 ರೂ. ಕಡಿತ ಮಾಡಿ ಕೇಂದ್ರ ಸರ್ಕಾರ ಆದೇಶ ನೀಡಿದೆ. ನವದೆಹಲಿಯಲ್ಲಿ ವಿತ್ತಸಚಿವ ಅರುಣ್ ಜೇಟ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಚಾರವನ್ನು ತಿಳಿಸಿದರು.

ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬ್ಕಾರಿ ಸುಂಕದಲ್ಲಿ 1.50 ರೂ. ಕಡಿತ ಮಾಡಿದ್ದು, ಎರಡೂ ಪೆಟ್ರೋಲ್ ಉತ್ಪನ್ನಗಳ ಮೇಲೆ ಲೀಟರ್‌ಗೆ ತಲಾ ಒಂದು ರೂ. ಕಡಿತ ಮಾಡುವಂತೆ ತೈಲ ಮಾರುಕಟ್ಟೆ ಕಂಪನಿಗಳಿಗೆ ಸರ್ಕಾರ ತಿಳಿಸಿದೆ.

ಇದರ ಬೆನ್ನ ಹಿಂದೆಯೇ ಗುಜರಾತ್ ಮತ್ತು ಮಹಾರಾಷ್ಟ್ರ ಇಂಧನ ದರಗಳಲ್ಲಿ ಲೀಟರ್‌ಗೆ ತಲಾ 2.50 ರೂ. ಇಳಿಕೆ ಮಾಡಿವೆ.
ಅಬ್ಕಾರಿ ಸುಂಕದ ಕಡಿತದ ಪರಿಣಾಮದಿಂದ ಬೊಕ್ಕಸಕ್ಕೆ  10,500 ಕೋಟಿ ರೂ. ಹೊರೆಯಾಗುತ್ತದೆ ಎಂದು ಜೇಟ್ಲಿ ಹೇಳಿದರು.
 

Recent Comments

Leave Comments

footer
Top