ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಸಚಿವರನ್ನು ಉಪಾಹಾರ ಕೂಟಕ್ಕೆ ಕರೆದಿದ್ದು, ಉಪಾಹಾರ ಕೂಟಕ್ಕೆ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿರದ ವಿಚಾರದ ಬಗ್ಗೆ ಮಾತನಾಡುತ್ತಾ ಅವರನ್ನು ಯಾವಾಗ ಕರೆಯಬೇಕೋ ಆವಾಗ ಕರೆಯುತ್ತೇವೆ.
ಉಪಾಹಾರ ಕೂಟದ ಬಗ್ಗೆ ಅವರ ಮನೆಯಲ್ಲಿಯೇ ನಿರ್ಧರಿಸಿದ್ದಾಗಿ ಡಿಕೆಶಿ ಹೇಳಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಚಿವ ಡಿಕೆಶಿ ಮೇಲೆ ಟಾರ್ಗೆಟ್ ಮಾಡಲಾಗುತ್ತಿದೆ. ಇಡಿ, ಐಟಿ ಬಳಸಿಕೊಂಡು ಟಾರ್ಗೆಟ್ ಮಾಡಲಾಗುತ್ತಿದೆ.
ಇದರ ವಿರುದ್ಧ ಎಲ್ಲಾ ಸಚಿವರು ಡಿಕೆಶಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಉಪಾಹಾರ ಕೂಟದಲ್ಲಿ ಹಿರಿಯ ಸಚಿವರು ಸಲಹೆ ಮಾಡಿದರು. ಕೇಂದ್ರ ಬಿಜೆಪಿ ನಾಯಕರು ಇಡಿ, ಐಟಿ ಮೂಲಕ ಕಾಟ ಕೊಡುತ್ತಿದ್ದು ಇದೇ ಒತ್ತಡದಲ್ಲಿದ್ದೇನೆಂದು ಡಿಕೆಶಿ ಹೇಳಿದರು.
Recent Comments