ಬೆಂಗಳೂರು: ಈಗಿನ ಮೈತ್ರಿ ವಿಧಾನಸಭೆ ಚುನಾವಣೆಗೆ ಮಾತ್ರ ಸೀಮಿತವಾಗಿದ್ದು, ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲೂ ಸ್ಪರ್ಧಿಸುವುದಾಗಿ ಬಿಎಸ್ಪಿಯ ಸಚಿವ ಎನ್. ಮಹೇಶ್ ತಿಳಿಸಿದ್ದಾರೆ.
ಮೈತ್ರಿ ಪಕ್ಷಗಳ ವಿರುದ್ಧ ಮಹೇಶ್ ಗರಂ ಆಗಿ ಮಾತನಾಡಿದರು. ಯಾವುದೇ ಪಕ್ಷವು ಸಾಮಾಜಿಕ-ಆರ್ಥಿಕ ಸಮಾನತೆ ತರಲು ಸಾಧ್ಯವಾಗಿಲ್ಲ. ಆದ್ದರಿಂದಲೇ ಬಹುಜನಸಮಾಜ ಪಕ್ಷ ಹುಟ್ಟಿಕೊಂಡಿದೆ. ಈ ಜಾತಿ ವ್ಯವಸ್ಥೆ, ಅಸಮಾನತೆ ಎಲ್ಲಿವರೆಗೆ ಇರುತ್ತದೆಯೋ ಅಲ್ಲಿವರೆಗೆ ಬಿಜೆಪಿ, ಕಾಂಗ್ರೆಸ್ ಮೊದಲಾದ ಪಕ್ಷಗಳು ಇರುತ್ತವೆ ಎಂದು ಮಹೇಶ್ ಹೇಳಿದರು.
ಕಾಂಗ್ರೆಸ್ ಪಕ್ಷವಾಗಲೀ ಬಿಜೆಪಿಯಿಂದಾಗಿ ಸಾಮಾಜಿಕ ಆರ್ಥಿಕ ಸಮಾನತೆ ತರಲು ಸಾಧ್ಯವಾಗಿಲ್ಲ. ಬಿಎಸ್ಪಿಯಿಂದ ಮಾತ್ರ ಇದನ್ನು ತರಲು ಸಾಧ್ಯವಾಗುತ್ತದೆ. ಆದ್ದರಿಂದ ಬಿಎಸ್ಪಿ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲೂ ಏಕಾಂಗಿಯಾಗಿ ಸ್ಪರ್ಧಿಸುತ್ತದೆ ಎಂದು ಮಹೇಶ್ ಹೇಳಿದ್ದಾರೆ.
Recent Comments