• 17 February 2019 13:14
Jai Kannada
Jai Kannada
Blog single photo
October 04, 2018

ಕಾಂಗ್ರೆಸ್ ಮುಖಂಡ ಅರುಣ್ ಕೊಲೆಯ ರಹಸ್ಯ ಬಯಲು 


ಬೆಂಗಳೂರು: ಅಳ್ಳಾಳಸಂದ್ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರುಣ್ ಕೊಲೆಯ ರಹಸ್ಯ ಬಯಲಾಗಿದ್ದು, ಮನೋಜ್ ಅಲಿಯಾಸ್ ಕೆಂಚನನ್ನು ಪೊಲೀಸರು ಶೂಟ್ ಔಟ್ ಮೂಲಕ ಅರೆಸ್ಟ್ ಮಾಡಿದ್ದಾರೆ. ಫೈನಾನ್ಸ್ ವಿಚಾರದಲ್ಲಿ ಕೊಲೆಯಾಗಿತ್ತು ಎಂದು ಭಾವಿಸಲಾಗಿತ್ತು. ಆದರೆ  ವೈಷಮ್ಯದಿಂದ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ..

. ಕಡಬಗೆರೆ ಸೀನನ ಶೂಟ್ ಔಟ್ ಪ್ರಕರಣದಲ್ಲಿ ಮನೋಜ್ ಅಲಿಯಾಸ್ ಕೆಂಚನ ಬಳಿ ಪಿಸ್ತೂಲ್ ಪತ್ತೆಯಾಗಿದ್ದರಿಂದ ಅವನ ವಿಚಾರಣೆ ನಡೆಸುತ್ತಿದ್ದಾಗ ಅರುಣ್‌ನನ್ನು ಸಹ ವಿಚಾರಣೆ ನಡೆಸಿ ಬಿಟ್ಟು ಕಳಿಸಲಾಯಿತು. ಅರುಣ್‌ ತನ್ನ ಬಿಡುಗಡೆಗೆ ನೆರವಾಗಲಿಲ್ಲವೆಂದು ಅರುಣ್ ಮೇಲೆ ಕೆಂಚ ಸಿಟ್ಟಾಗಿದ್ದ.  ಬಳಿಕ ಜೈಲಿನಿಂದ  ಬಿಡುಗಡೆಯಾಗಿ ಬಂದಿದ್ದ ಕೆಂಚ .

ಅರುಣ್ ತನ್ನ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರಿಂದ ಕೆಂಚ ಕೋಪಗೊಂಡು ಅವನ ಕೊಲೆಗೆ ಸ್ಕೆಚ್ ರೂಪಿಸಿ ಅದನ್ನು ಕಾರ್ಯರೂಪಕ್ಕೆ ತಂದಿದ್ದ. ಸ್ನೇಹಿತರ ಜತೆ ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ.  ಕೆಂಚನ ಮೇಲೆ ಅನುಮಾನಗೊಂಡ ಪೊಲೀಸರು ಅವನನ್ನು ಬಂಧಿಸಲು ಹೋದಾಗ ಕೆಂಚ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ. ಪೊಲೀಸರು ಅವನ ಕಾಲಿಗೆ ಶೂಟ್ ಔಟ್ ಮಾಡಿದ್ದರು

Recent Comments

Leave Comments

footer
Top