ಬೆಂಗಳೂರು: ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಪಕ್ಷದಲ್ಲೇ ಗೊಂದಲ ಮೂಡಿದೆ. ರಾಮನಗರ ಮತ್ತು ಜಮಖಂಡಿ ಉಪಚುನಾವಣೆಯ ಬಳಿಕ ಸಂಪುಟ ವಿಸ್ತರಣೆ ಮಾಡಿ ಎಂದು ಕೆಲ ಹಿರಿಯ ನಾಯಕರು ಸಲಹೆ ಮಾಡಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಶೀಘ್ರದಲ್ಲೇ ಸಂಪುಟ ವಿಸ್ತರಣೆ ಮಾಡೋಣ ಎಂದು ಸಲಹೆ ಮಾಡಿದ್ದು, ದಿನೇಶ್ ಗುಂಡೂರಾವ್ ಕೂಡ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.
ಸಂಪುಟ ವಿಸ್ತರಣೆ ಮಾಡಿದರೆ ಮತ್ತೆ ಗೊಂದಲ, ಅಸಮಾಧಾನ ಉಂಟಾಗುತ್ತದೆ ಎಂದು ಕೆಲ ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಸಂಪುಟ ವಿಸ್ತರಣೆ ಮಾಡದಿದ್ದರೆ ಒತ್ತಡ ಹೆಚ್ಚಾಗಲಿದೆ.
ಯಾವತ್ತಿದ್ದರೂ ವಿಸ್ತರಣೆ ಮಾಡಲೇಬೇಕಲ್ಲವಾ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಂಪುಟ ವಿಸ್ತರಣೆ ಮುಂದಕ್ಕೆ ಹಾಕುತ್ತಿದ್ದರೆ ಅತೃಪ್ತ ಶಾಸಕರು ಆಪರೇಷನ್ ಕಮಲದ ಬಲೆಗೆ ಬೀಳಬಹುದು ಎಂಬ ಆತಂಕವೂ ಮನೆಮಾಡಿದೆ.
Recent Comments