• 18 October 2018 20:06
Jai Kannada
Jai Kannada
Blog single photo
October 03, 2018

ನಮ್ಮ ಕುಟುಂಬದ ವಿಚಾರ ಬೀದಿಗೆ ಬರುವುದು ಬೇಡ: ಕುಮಾರಸ್ವಾಮಿ 

ಬೆಂಗಳೂರು: ಮನೆ ವಿಷಯಗಳನ್ನು ತೆಗೆದುಕೊಂಡು ಬೀದಿಗೆ ಪ್ರಚಾರ ಮಾಡಬೇಕಾ. ನಮ್ಮ ಕುಟುಂಬದ ವಿಚಾರ ಬೀದಿಗೆ ಬರುವುದು ಬೇಡ. ಕುಟುಂಬದ ಸಮಸ್ಯೆಗಳನ್ನು ಚರ್ಚೆ ಮಾಡುವುದಕ್ಕೆ ಕರೆದಿದ್ದೇನೆ.

ಐದು ಗಂಟೆ ಮೇಲೆ ನಿಮ್ಮನ್ನು ಕರೆದು ಏನು ಹೇಳಬೇಕೋ ಅದನ್ನು ತಿಳಿಸುತ್ತೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

ಜೆಡಿಎಸ್ ಸಭೆಗೆ ಮಾಧ್ಯಮಗಳ ಪ್ರವೇಶಕ್ಕೆ ಕುಮಾರಸ್ವಾಮಿ ನಿಷೇಧ ವಿಧಿಸಿದ್ದಕ್ಕೆ ಸಂಬಂಧಿಸಿದಂತೆ ಅವರು ಮಾತನಾಡುತ್ತಿದ್ದರು.  ರಾಮನಗರ ತಾಲೂಕಿನ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಕುಮಾರಸ್ವಾಮಿ ಜೆಡಿಎಸ್ ಸಭೆ ಕರೆದಿದ್ದು, ಅದರಲ್ಲಿ ಮಾಧ್ಯಮಗಳಿಗೆ ಪ್ರವೇಶ ನೀಡದಂತೆ ಸೂಚನೆ ನೀಡಿದ್ದಾರೆ. ಬೆಳಿಗ್ಗೆ ರಾಮನಗರದ ಮುಖಂಡರ ಸಭೆಯನ್ನು ಕರೆದಿದ್ದು, ಮಧ್ಯಾಹ್ನ ಚೆನ್ನಪಟ್ಟಣದ ಜೆಡಿಎಸ್ ಮುಖಂಡರ ಸಭೆಯನ್ನು ಕರೆದಿದ್ದಾರೆ. 

Recent Comments

Leave Comments

footer
Top