ಮೈಸೂರು: ಮೈಸೂರಿನ ರಾಜಮಾತೆ ಪ್ರಮೋದಾ ದೇವಿ ಏನೇ ಹೇಳಲಿ, ಸರ್ಕಾರ ನಡೆಸುವ ಜನತೆಯ ನಾಡಹಬ್ಬವೇ ನಿಜವಾದ ದಸರಾ ಹಬ್ಬ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿದ್ದಾರೆ. ಸರ್ಕಾರ ನಡೆಸುವ ದಸರಾ ನಿಜವಾದ ದಸರಾ ಅಲ್ಲ. ರಾಜಮನೆತನ ನಡೆಸುವ ಖಾಸಗಿ ದರ್ಬಾರ್ ನಿಜವಾದ ದಸರಾ ಎಂದು ಪ್ರಮೋದಾ ಹೇಳಿಕೆ ನೀಡಿದ್ದರು.
ಆದರೆ ವಿಶ್ವನಾಥ್ ಈ ಕುರಿತು ವಿವರಣೆ ನೀಡಿ ಖಾಸಗಿ ದರ್ಬಾರ್ ಸೀಮಿತ ಜನಕ್ಕೆ ಮೀಸಲಾಗಿದ್ದು, ಎಲ್ಲಾ ಜನರು ಭಾಗವಹಿಸುವ ನಾಡಹಬ್ಬವೇ ನಿಜವಾದ ದಸರಾ. ಸಾಹಿತ್ಯ, ಸಂಸ್ಕೃತಿ, ಕಲೆ ಎಲ್ಲವನ್ನು ಬಿಂಬಿಸುವುದು ನಾಡಹಬ್ಬ. ನಾವು ರಾಜಮನೆತನದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದಸರಾ ನಡೆಸುತ್ತೇವೆ ಎಂದು ವಿಶ್ವನಾಥ್ ಸ್ಪಷ್ಟಪಡಿಸಿದರು.
Recent Comments