ಬೆಂಗಳೂರು: ಯಾವುದೇ ಸ್ಥಾನಮಾನ ಸಿಗದೇ ಅತೃಪ್ತಿಯಿಂದ ಕುದಿಯುತ್ತಿರುವ ಶಾಸಕರ ಮನವೊಲಿಕೆಗೆ ಸದ್ಯಕ್ಕೆ ಕೆಲವರಿಗಾದರೂ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಅವರನ್ನು ಸಂತೃಪ್ತಿಪಡಿಸುವ ಕೆಲಸ ನಡೆಯುತ್ತಿದೆ. ಉಳಿದಿರುವ 6 ಸಚಿವರ ಖಾತೆಗಳನ್ನು ಈಗಲೇ ಹಂಚಿದರೆ ಸಚಿವ ಸಂಪುಟ ವಂಚಿತರಿಂದ ಬಂಡಾಯ ಭುಗಿಲೇಳುವ ಭಯದಿಂದ ಸಚಿವ ಸಂಪುಟ ವಿಸ್ತರಣೆಯನ್ನು ಮುಂದಕ್ಕೆ ಹಾಕಲಾಗುತ್ತಿದೆ. ಆದರೆ ಸದ್ಯಕ್ಕೆ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಕೆಲವರಿಗೆ ನೀಡಿ ಅವರ ಅತೃಪ್ತಿಯನ್ನು ಸಾಧ್ಯವಾದಷ್ಟು ಶಮನ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.
ನಿಗಮ, ಮಂಡಳಿಗಳ ನೇಮಕ್ಕೆ ಶಾಸಕರ ಪಟ್ಟಿಯನ್ನು ಕಾಂಗ್ರೆಸ್ ನಾಯಕರು ಈಗಾಗಲೇ ಸಿದ್ಧಪಡಿಸಿದ್ದಾರೆ. ಇಂದು ಸಂಜೆ ವೇಳೆಗೆ ಶಾಸಕರ ಪಟ್ಟಿ ಅಂತಿಮಗೊಳ್ಳುವ ಸಾಧ್ಯತೆಯಿದೆ.
ಸೋಮಶೇಖರ್, ಭೈರತಿ ಬಸವರಾಜ್, ಬಿ.ಸಿ. ಪಾಟೀಲ್, ಸಂಗಮೇಶ್, ಶಿವರಾಮ್ ಹೆಬ್ಬಾರ್, ಬೀಮಾನಾಯಕ್, ರಘುಮೂರ್ತಿ, ನಾಗೇಶ್ ಅವರ ನೇಮಕ ಬಹುತೇಕ ಖಚಿತವಾಗಿದೆ. ಮೊದಲಿಗೆ 20 ನಿಗಮ ಮಂಡಳಿಗಳ ಪೈಕಿ 15 ನಿಗಮ-ಮಂಡಳಿಗಳಿಗೆ ನೇಮಕವಾಗುವ ಸಾಧ್ಯತೆಯಿದೆ.
Recent Comments