ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅವರು ಶರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ನಾಗರತ್ನ ಅವರ ಮಕ್ಕಳು ದುನಿಯಾ ವಿಜಯ್ ಮತ್ತು ಕೀರ್ತಿಯವರ ನಿವಾಸಕ್ಕೆ ಹೋಗಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ಮೇಲೆ ಪ್ರಥಮ ಪತ್ರಿಕಾಗೋಷ್ಠಿ ನಡೆಸಿದ ವಿಜಿ ಮಾರುತಿಗೌಡರನ್ನು ನಮ್ಮ ಕಡೆಯ ಹುಡುಗರು ಹೊಡೆಯುತ್ತಿರುವುನ್ನು ಕಂಡು ರಕ್ತಸೋರುತ್ತಿದ್ದ ಅವನನ್ನು ಕಾರಿನಲ್ಲಿ ಕರೆದುಕೊಂಡು ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಎದುರು ಬಿಟ್ಟಿದ್ದಾಗಿ ದುನಿಯಾ ವಿಜಿ ಸ್ಪಷ್ಟಪಡಿಸಿದರು. ಆದರೆ ತಮ್ಮ ಮೇಲೆ ಸೆಕ್ಷನ್ ಹಾಕಿ ಜೈಲಿಗೆ ಕಳಿಸಲಾಯಿತು ಎಂದು ವಿಜಿ ಹೇಳಿದರು.
ತಾವು ಜಾಕ್ ರಾಡ್ನಲ್ಲಿ ಹೊಡೆದಿದ್ದರೆ, 25 ಹೊಲಿಗೆಗಳು ಬಿದ್ದಿದ್ದರೆ ದಯಮಾಡಿ 25 ಹೊಲಿಗೆಗಳನ್ನು ತೋರಿಸಲಿ ಎಂದು ವಿಜಿ ಸವಾಲು ಹಾಕಿದರು. ನಾನು ಮಾರುತಿಗೌಡನ ಮೇಲೆ ಹಲ್ಲೆ ಮಾಡಿಲ್ಲ. ಆದರೆ ತಪ್ಪುಭಾವನೆಯಿಂದ ನನ್ನ ಮೇಲೆ ಕೇಸು ದಾಖಲಿಸಲಾಗಿದೆ ಎಂದು ಹೇಳಿದರು. ನನಗೂ ಕಿಟ್ಟಿಗೂ ಯಾವುದೇ ದ್ವೇಷವಿಲ್ಲ ಎಂದು ವಿಜಿ ಹೇಳಿದರು. ನನ್ನ ಮಗ ಸಾಮ್ರಾಟ್ ಮೇಲೆ ಹಲ್ಲೆ ಮಾಡಿದರು. ಕಿಟ್ಟಿಗೆ ಮಾರುತಿ ಅಣ್ಣನ ಮಗ, ನನಗೆ ಸಾಮ್ರಾಟ್ ಸ್ವಂತ ಮಗ ಎಂದು ನುಡಿದರು.
Recent Comments