• 18 October 2018 19:14
Jai Kannada
Jai Kannada
Blog single photo
September 29, 2018

ಭೂಕಂಪದಿಂದ ಅಪ್ಪಳಿಸಿದ ಸುನಾಮಿಗೆ ಇಂಡೋನೇಶಿಯಾದಲ್ಲಿ ಅನೇಕ ಮಂದಿ ಬಲಿ 

ಜಕಾರ್ತ: ಶಕ್ತಿಶಾಲಿ ಭೂಕಂಪ ಮತ್ತು ಸುನಾಮಿ ಮಧ್ಯ ಇಂಡೊನೇಶಿಯಾವನ್ನು ಅಪ್ಪಳಿಸಿದ್ದರಿಂದ ಶನಿವಾರ ಅನೇಕ ಜನರು ಸಾವನ್ನಪ್ಪಿದ್ದಾರೆ. ಸುಲಾವೇಸಿ ದ್ವೀಪದ ತೀರದಲ್ಲಿರುವ ಮೂರುವರೆ ಲಕ್ಷ ಜನರ ನಿವಾಸವಾದ ಪಾಲುವಿನ ಚಿತ್ರಗಳಲ್ಲಿ ತೀರದ ಬಳಿ ನೆಲದ ಮೇಲೆ ಬಿದ್ದಿರುವ ಅರೆನಗ್ನ ದೇಹಗಳು ಗೋಚರಿಸಿದವು.

ಬೆಳಿಗ್ಗೆ 1.5 ಮೀಟರ್ ಎತ್ತರದ ಸುನಾಮಿ ಅಲೆಗಳು ನಗರವನ್ನು ಅಪ್ಪಳಿಸಿದ್ದವು. ಪ್ರಬಲ ಭೂಕಂಪದಿಂದ ಹುಟ್ಟಿಕೊಂಡ ಸುನಾಮಿಯಿಂದ ಅನೇಕ ಕಟ್ಟಡಗಳು ನೆಲಸಮವಾಗಿದ್ದು, ಸ್ಥಳೀಯರು ಸುರಕ್ಷಿತ ಎತ್ತರದ ಪ್ರದೇಶಗಳತ್ತ ಓಡಿದರು.

ಪಾಲುವಿನ ಪಾರ್ಕಿಂಗ್ ಪ್ರದೇಶದ ಎತ್ತರದ ಮಹಡಿಯಿಂದ ಚಿತ್ರೀಕರಿಸಿದ ವಿಡಿಯೊ ಫೂಟೇಜ್‌ನಲ್ಲಿ ಸುನಾಮಿ ಅಲೆಗಳ ಅಪ್ಪಳಿಸುವಿಕೆಯಿಂದ ಅನೇಕ ಕಟ್ಟಡಗಳು ನೆಲಸಮವಾದ ಮತ್ತು ದೊಡ್ಡ ಮಸೀದಿ ಮುಳುಗಿದ ದೃಶ್ಯ ತೋರಿಸಿದೆ.

Recent Comments

Leave Comments

footer
Top