• 20 January 2018 12:58
Jai Kannada
Jai Kannada
Blog single photo
December 20, 2017

4 ನಿಮಿಷದ ಪಾತ್ರಕ್ಕೆ 30 ಕೆಜಿ ತೂಕ ಇಳಿಸಿಕೊಂಡ ಧ್ರುವ ಸರ್ಜಾ 


ಬೆಂಗಳೂರು: ಸ್ಯಾಂಡಲ್ ವುಡ್‌ನ ಧ್ರುವ ಸರ್ಜಾ ಕನ್ನಡದ ಯಂಗ್ ಸ್ಟಾರ್. ಅವರ ಭರ್ಜರಿ ಚಿತ್ರ ಶತದಿನೋತ್ಸವ ಪೂರೈಸಿದೆ. ಭರ್ಜರಿ ಸೆಂಚುರಿ ಬಾರಿಸುವ ಮೊದಲೇ ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರಕ್ಕೆ ಧ್ರುವ ಸಹಿ ಹಾಕಿದ್ದಾರೆ.

ಪೊಗರು ಚಿತ್ರದಲ್ಲಿ ಧ್ರುವ ಶಾಲಾ ಹುಡುಗನ ಪಾತ್ರ ಮಾಡಬೇಕಿದ್ದು, ಅದಕ್ಕಾಗಿ ಮೈತೂಕವನ್ನು 30 ಕೆಜಿ ಇಳಿಸಿಕೊಳ್ಳುವ ರಿಸ್ಕ್ ತೆಗೆದುಕೊಂಡಿದ್ದಾರೆ. ಒಳ್ಳೆಯ ಮೈಕಟ್ಟಿನ, ಬಾಡಿ ಬಿಲ್ಡಿಂಗ್‌ ಮಾಡಿದ್ದ ಧ್ರುವನನ್ನು ನೋಡಿ ಮೆಚ್ಚಿಕೊಂಡು ಅನೇಕ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.

ಆದರೆ ಈಗ ತೆಳ್ಳಗಿನ ಧ್ರುವನನ್ನು ನೋಡುವುದಕ್ಕೆ ಅಭಿಮಾನಿಗಳಿಗೆ ಒಂದು ರೀತಿಯ ಮುಜುಗರ. ಆದರೆ ಪಾತ್ರಗಳಿಗೆ ಜೀವ ತುಂಬುವುದಕ್ಕೆ ಧ್ರುವ ಮೈತೂಕ ಇಳಿಸಿಕೊಂಡಿದ್ದಾರೆಂದು ಅಭಿಮಾನಿಗಳು ಸಮಾಧಾನ ಪಟ್ಟುಕೊಂಡಿದ್ದಾರೆ. ಆದರೆ ಧ್ರುವ ಕೇವಲ ನಾಲ್ಕು ನಿಮಿಷ ಶಾಲಾ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಲ್ಕು ನಿಮಿಷಕ್ಕೆ 30 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಆದರೆ ಅಭಿಮಾನಿಗಳಿಗೆ ನಿರಾಶೆಯಾಗದಂತೆ ಆರಂಭದಲ್ಲೇ ಧ್ರುವ ತಮ್ಮ ಸಹಜವಾದ ಲುಕ್‌ನಲ್ಲೇ ಮತ್ತು ಮೈಕಟ್ಟಿನಲ್ಲಿ  ಎಂಟ್ರಿ ಕೊಟ್ಟಿದ್ದಾರೆ.

Recent Comments

Leave Comments

footer
Top