• 20 October 2018 04:03
Jai Kannada
Jai Kannada
Blog single photo
September 28, 2018

ಅಯ್ಯಪ್ಪನ ದರ್ಶನಕ್ಕೆ ಮಹಿಳೆಯರಿಗೆ ಗ್ರೀನ್ ಸಿಗ್ನಲ್ 

ನವದೆಹಲಿ: ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯ ಶಬರಿಮಲೆಗೆ ಮಹಿಳೆಯರು ಭೇಟಿ ಮಾಡಬಹುದೇ ಬೇಡವೇ ಎಂಬ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದಿದ್ದು ಎಲ್ಲಾ ವಯಸ್ಸಿನ ಮಹಿಳೆಯರ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡುವ ಮೂಲಕ 800 ವರ್ಷಗಳ ಪದ್ಧತಿಗೆ ತೆರೆಬಿದ್ದಿದೆ.

 ಇದರಿಂದ  10 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಋತುಮತಿಯಾಗುವ ಕಾರಣದಿಂದ ಕಳೆದ 800 ವರ್ಷಗಳಿಂದ ಅವರ ದೇವಸ್ಥಾನ ಪ್ರವೇಶಕ್ಕೆ ಇದ್ದ ನಿಷೇಧವು ರದ್ದಾಗಿದೆ. ಋತುಮತಿಯಾಗುವ ಹಿನ್ನೆಲೆಯಲ್ಲಿ ಮಹಿಳೆಯರು ಅಪವಿತ್ರರಾಗುತ್ತಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ವಾದಿಸುತ್ತಾ ಬಂದಿದ್ದು, ಕಳೆದ 800 ವರ್ಷಗಳಿಂದ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಲಾಗಿತ್ತು.

ಸುಪ್ರೀಂಕೋರ್ಟ್ ಸಿಜೆ ದೀಪಕ್ ಮಿಶ್ರಾ ಸೇರಿದಂತೆ ಪಂಚ ಪೀಠ ನ್ಯಾಯಾಧೀಶರು ಪ್ರತ್ಯೇಕ ತೀರ್ಪನ್ನು ನೀಡಿದ್ದು, ಮಹಿಳೆಯರನ್ನು ದುರ್ಬಲರಂತೆ ಕಾಣಬಾರದು. ಮಹಿಳೆಯರಿಗೆ ದೇವತೆಯ ಸ್ಥಾನ ನೀಡಲಾಗಿದ್ದು, ಸಮಾಜದಲ್ಲಿ ಮಹಿಳೆಯರನ್ನು ಕುರಿತ ಗ್ರಹಿಕೆ ಬದಲಾಗಬೇಕು ಎಂದು ಹೇಳಿದ್ದಾರೆ. 

Recent Comments

Leave Comments

footer
Top