• 19 April 2019 20:32
Jai Kannada
Jai Kannada
Blog single photo
September 26, 2018

ಕುಡಿದ ಮತ್ತಿನಲ್ಲಿ ಚಾಲನೆ ಮಾಡಿದ್ದರಿಂದ ದರ್ಶನ್ ಕಾರು ಅಪಘಾತವಾಗಿದೆಯಾ? 

ಬೆಂಗಳೂರು: ದರ್ಶನ್ ಕಾರು ಅಪಘಾತವು ಕುಡಿದ ಮತ್ತಿನಲ್ಲಿ ಕಾರನ್ನು ವೇಗವಾಗಿ ಚಾಲನೆ ಮಾಡಿದ್ದರಿಂದ ಆಗಿದೆಯಾ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ. ಕಾರನ್ನು ನಿಜವಾಗಿ ಚಾಲನೆ ಮಾಡುತ್ತಿದ್ದವರು ಯಾರು, ಕಾರಿನ ಚಾಲಕರು ಡ್ರೈವ್ ಮಾಡುವಾಗ ಕುಡಿತ ಮತ್ತಿನಲ್ಲಿದ್ದರೇ ಮುಂತಾದ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ,

ಕಾರಿನಲ್ಲಿ 4 ಮಂದಿ ಪ್ರಯಾಣಿಸುತ್ತಿದ್ದರು ಎಂದು ಮೊದಲಿಗೆ ದರ್ಶನ್ ಕಡೆಯವರು ಹೇಳಿಕೆ ನೀಡಿದ್ದರು. ಕಾರನ್ನು ನಿಜವಾಗಿ ಚಾಲನೆ ಮಾಡಿದವರು ಯಾರು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.

 ಪೊಲೀಸರು ನೀಡಿದ ಹೇಳಿಕೆಯಲ್ಲಿ ಕಾರಿನಲ್ಲಿ  5 ಜನರಿದ್ದರು. ಆದರೆ ಆಸ್ಪತ್ರೆಯ ವರದಿಯಲ್ಲಿ ಕಾರಿನಲ್ಲಿ 6 ಜನರಿದ್ದರು. ಗೊಂದಲಕಾರಿ ಹೇಳಿಕೆಗಳಿಂದ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿದೆಯಾ ಎಂಬ ಅನುಮಾನ ಕಾಡಿದೆ. 

Recent Comments

Leave Comments

footer
Top