ಬೆಂಗಳೂರು: ಸಿನಿಮಾ ನಟ ದರ್ಶನ್ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಸಿಕ್ಕಿದ್ದು, ಕಾರಿನಲ್ಲಿ ಒಟ್ಟು 6 ಜನರಿದ್ದರು ಎನ್ನುವುದು ಗೊತ್ತಾಗಿದೆ. ಆಸ್ಪತ್ರೆಯ ವರದಿ ಪ್ರಕಾರ, ಒಟ್ಟು 6 ಜನರಿಗೆ ಚಿಕಿತ್ಸೆ ನೀಡಲಾಗಿರುವುದು ಗೊತ್ತಾಗಿದೆ. ಎಫ್ಐಆರ್ ಮಾಹಿತಿಯಲ್ಲಿ ಕೂಡ ಕಾರಿನಲ್ಲಿ ಒಟ್ಟು ನಾಲ್ಕು ಮಂದಿ ಪ್ರಯಾಣಿಸುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ.
ಆದರೆ ಆಸ್ಪತ್ರೆಯ ಎಂಎಲ್ಸಿ ವರದಿಯಲ್ಲಿ 6 ಮಂದಿ ಎಂದು ಹೇಳಿರುವುದರಿಂದ ಕಾರಿನಲ್ಲಿದ್ದ ಇನ್ನಿಬ್ಬರು ಯಾರು ಎನ್ನುವುದು ನಿಗೂಢವಾಗಿ ಉಳಿದಿದೆ. ಕಾರಿನಲ್ಲಿ ಮತ್ತಿಬ್ಬರು ಇದ್ದಿದ್ದನ್ನು ದರ್ಶನ್ ಆಪ್ತರು ಮುಚ್ಚಿಟ್ಟಿದ್ದೇಕೆ ಎಂಬ ಪ್ರಶ್ನೆ ಮೂಡಿದೆ.
ಈ ನಡುವೆ ಪೊಲೀಸರ ಎದುರಿನಲ್ಲೇ ಕಾರನ್ನು ಸ್ಥಳಾಂತರಿಸಿದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆದ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ್ ರಾವ್ ತಿಳಿಸಿದ್ದಾರೆ.
Recent Comments