• 15 December 2018 21:32
Jai Kannada
Jai Kannada
Blog single photo
September 22, 2018

ಸರ್ಕಾರದ ಆಂತರಿಕ ಸಂಘರ್ಷಕ್ಕೆ ಬಿಜೆಪಿಯನ್ನು ಹೊಣೆ ಮಾಡುವುದು ಸರಿಯಲ್ಲ: ಯಡಿಯೂರಪ್ಪ

ಬೆಂಗಳೂರು: ಬಿಜೆಪಿ ಕುದುರೆ ವ್ಯಾಪಾರದಲ್ಲಿ ನಿರತವಾಗಿದೆ ಎಂದು ಮುಖ್ಯಮಂತ್ರಿ ಮತ್ತು ಜೆಡಿಎಸ್ ಮುಖಂಡರು ವಿಧಾನಸಭೆ ಸ್ಪೀಕರ್ ಅವರಿಗೆ ನೀಡಿರುವ ದೂರನ್ನು ಪ್ರಸ್ತಾಪಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇದೊಂದು ತಪ್ಪು ಹೆಜ್ಜೆ ಎಂದು ಪರಿಗಣಿಸಿದರು. ಸಮ್ಮಿಶ್ರ ಪಾಲುದಾರ ಪಕ್ಷ ಕಾಂಗ್ರೆಸ್‌ನಲ್ಲಿ ಬೆಳೆಯುತ್ತಿರುವ ಅತೃಪ್ತಿ ನಿವಾರಣೆಗೆ ಜೆಡಿಎಸ್ ವಿಫಲವಾಗಿದೆ. ಅದರ ಆಂತರಿಕ ಸಂಘರ್ಘಗಳಿಗಾಗಿ ಬಿಜೆಪಿಯನ್ನು ಹೊಣೆ ಮಾಡುವುದು ಸರಿಯಲ್ಲ, ಬಿಜೆಪಿ ಮುಖಂಡರು ಅವರ ಶಾಸಕರನ್ನು ತಮ್ಮ ಪಕ್ಷದತ್ತ ಸೆಳೆಯಲು ಯತ್ನಿಸಿದ್ದಾರೆಂದು ಸಮ್ಮಿಶ್ರ ಸರ್ಕಾರದ ಮುಖಂಡರು ಆರೋಪಿಸುತ್ತಲೇ ಇದ್ದಾರೆ. ತಮ್ಮ ಪಕ್ಷದ ನಾಯಕರಾರೂ ಕಾಂಗ್ರೆಸ್, ಜೆಡಿಎಸ್ ಮುಖಂಡರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಯತ್ನಿಸಿಲ್ಲ. ಪ್ರಸಕ್ತ ಸರ್ಕಾರ ಪತನಗೊಂಡರೆ ಅದು ಅವರದ್ದೇ ತಪ್ಪುಗಳು ಮತ್ತು ಆಂತರಿಕ ಒತ್ತಡಗಳು ಕಾರಣವಾಗುತ್ತವೆ ಎಂದು ಪ್ರತಿಪಾದಿಸಿದರು.ಕಾನೂನಿನ ನಿಬಂಧನೆಗಳ ಬಗ್ಗೆ ಜೆಡಿಎಸ್ ನಾಯಕರಿಗೆ ಅರಿವಿಲ್ಲ. ಸರ್ಕಾರ ತನ್ನ ಕರ್ತವ್ಯದಲ್ಲಿ ವಿಫಲವಾದರೆ, ಪ್ರತಿಪಕ್ಷಗಳು ಪ್ರತಿಭಟನೆಗಳನ್ನು ನಡೆಸುವುದು ಅದರ ಧರ್ಮವಾಗಿದೆ. ಜೆಡಿಎಸ್ ಕೆಲವು ಕುಂಟು ನೆಪಗಳನ್ನು ಒಡ್ಡಿ ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿರುವುದಾಗಿ ಆರೋಪಿಸುತ್ತಿದೆ ಎಂದು ದೂರಿದರು.

Recent Comments

Leave Comments

footer
Top