• 16 October 2018 16:02
Jai Kannada
Jai Kannada
Blog single photo
September 21, 2018

ಜೆಡಿಎಸ್ ಶಾಸಕರಿಗೂ ತಟ್ಟಿದ ಆಪರೇಷನ್ ಕಮಲದ ಭೀತಿ 

ಬೆಂಗಳೂರು: ಆಪರೇಷನ್ ಕಮಲದ ಭೀತಿಯಿಂದ ಕಾಂಗ್ರೆಸ್ ಪಕ್ಷ ಕಂಗಾಲಾಗಿ ಯಾವ್ಯಾವ ಶಾಸಕರನ್ನು ಬಿಜೆಪಿ ಸಂಪರ್ಕಿಸಿದೆ? ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಹೇಗೆ? ಆಪರೇಷನ್ ಕಮಲಕ್ಕೆ ಯಾವ ಪ್ರತಿತಂತ್ರ ರೂಪಿಸಬಹುದು, ಜಾರಕಿಹೊಳಿ ಸಹೋದರರ ಅತೃಪ್ತಿ ಶಮನಗೊಳಿಸುವುದು ಹೇಗೆ ಮುಂತಾದ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಿರುವ ಬೆನ್ನ ಹಿಂದೆಯೇ ಜೆಡಿಎಸ್ ಶಾಸಕರಿಗೂ ಆಪರೇಷನ್ ಕಮಲದ ಭೀತಿ ತಟ್ಟಿದೆ.

ಈ  ಹಿನ್ನೆಲೆಯಲ್ಲಿ ನಾಳೆ ಹಾಸನದ ಖಾಸಗಿ ಹೊಟೆಲ್‌ನಲ್ಲಿ ಜೆಡಿಎಸ್‌ನ ಎಲ್ಲಾ ಶಾಸಕರಿಗೆ ಜೆಡಿಎಲ್‌ಪಿ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ದೇವೇಗೌಡ, ವಿಶ್ವನಾಥ್ ಹಾಜರಾಗಲಿದ್ದಾರೆ. ಬಿಜೆಪಿ ಆಮಿಷಗಳಿಗೆ ಬಲಿಯಾಗದಂತೆ ಎಚ್ಚರಿಕೆ ನೀಡಲು ಈ ಸಭೆ ಕರೆಯಲಾಗಿದೆ. 

Recent Comments

Leave Comments

footer
Top