• 16 October 2018 15:30
Jai Kannada
Jai Kannada
Blog single photo
September 21, 2018

ದಂಗೆ ಎಬ್ಬಿಸುವಂತೆ ಸಿಎಂ ಪ್ರಚೋದನೆ: ಶೋಭಾ ಕರಂದ್ಲಾಜೆ ಆರೋಪ 

ಬೆಂಗಳೂರು: ಕುಮಾರಸ್ವಾಮಿ ಹೇಳಿಕೆಗೆ ಸಂಬಂಧಿಸಿದಂತೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದು, ಸಿಎಂ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಡಾಲರ್ಸ್ ಕಾಲೋನಿಯಲ್ಲಿ  ವಾಗ್ದಾಳಿ ಮಾಡಿದ್ದಾರೆ. ಸಿಎಂ ಕುಮ್ಮಕ್ಕಿನಿಂದ ನಿನ್ನೆ ಬಿಎಸ್‌ವೈ ಮನೆ ಮುಂದೆ ಜನರು ಪ್ರತಿಭಟನೆ ಮಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಕುಮಾರಸ್ವಾಮಿ ದಂಗೆಯ ಮಾತನಾಡಿದ್ದಾರೆ. ಇದರಿಂದ ಜನರನ್ನು ಪ್ರಚೋದಿಸಿದಂತಾಗುತ್ತದೆ.

ಸಂವಿಧಾನರಕ್ಷಣೆ ಮಾಡುವವರೇ ಜನರನ್ನು ಪ್ರಚೋದನೆ ಮಾಡಿದ್ದಾರೆ.  ಆದ್ದರಿಂದ ಅವರ ವಿರುದ್ಧ ಕೇಸು ದಾಖಲಿಸುವಂತೆ ನಾವು ಡಿಜಿಪಿಗೆ ಮೊರೆ ಹೋಗುವುದಾಗಿ ಶೋಭಾ ಕರಂದ್ಲಾಜೆ ಹೇಳಿದರು.  ಇದಲ್ಲದೇ ರಾಜ್ಯಪಾಲರನ್ನು ಕೂಡ ಭೇಟಿ ಮಾಡಿ ಈ ವಿಷಯ ಪ್ರಸ್ತಾಪಿಸುವುದಾಗಿ ಹೇಳಿದರು.

ಕಲ್ಬುರ್ಗಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಷಿ ಸಂವಿಧಾನದ ಮೇರೆಗಹೆ ಪ್ರಮಾಣ ಮಾಡಿದ ಕುಮಾರಸ್ವಾಮಿ ರಾಜ್ಯದ ಜನತೆಗೆ ದಂಗೆ ಏಳುವ ಕರೆ ಕೊಟ್ಟಿದ್ದಾರೆ. ಸಿಎಂ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

Recent Comments

Leave Comments

footer
Top