• 18 November 2018 13:28
Jai Kannada
Jai Kannada
Blog single photo
September 07, 2018

ಜಪಾನ್‌ಗೆ ಅಪ್ಪಳಿಸಿದ ಭೂಕಂಪದಲ್ಲಿ 9 ಜನರ ಸಾವು 

ಟೋಕಿಯೊ: ರಿಕ್ಟರ್ ಮಾಪಕದಲ್ಲಿ 6.7 ಅಳತೆಯ ಶಕ್ತಿಶಾಲಿ ಭೂಕಂಪವು ಜಪಾನ್ ಹೊಕೈಡೊನಲ್ಲಿ ಅಪ್ಪಳಿಸಿದ್ದರಿಂದ ಕನಿಷ್ಠ 9 ಜನರು ಮೃತಪಟ್ಟಿದ್ದು, 300 ಮಂದಿ ಗಾಯಗೊಂಡಿದ್ದಾರೆ.

 ಭೂಕಂಪನದಿಂದಾಗಿ 30 ಜನರು ನಾಪತ್ತೆಯಾಗಿದ್ದು, 2000 ಜನರು 400 ಸ್ಥಳಗಳಲ್ಲಿ ಸ್ಥಾಪಿಸಲಾದ ತುರ್ತು ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸುಮಾರು 4600 ನಿವಾಸಿಗಳಿರುವ ಪರ್ವತಾಚ್ಛಾದಿತ ದ್ವೀಪದಲ್ಲಿ ಭೂಕಂಪದ ತೀವ್ರತೆಯ ಪ್ರಮಾಣವು 7 ರ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಇದರಿಂದ ಭೂಕುಸಿತ ಸಂಭವಿಸಿ 20 ಮನೆಗಳು ಸಮಾಧಿಯಾಗಿವೆ.

ಕಳೆದ ಕೆಲವು ದಿನಗಳಿಂದ ಮಾರಕ ಚಂಡಮಾರುತ ಅಪ್ಪಳಿಸಿ 10 ಜನರು ಬಲಿಯಾಗಿ ವ್ಯಾಪಕ ಹಾನಿ ಉಂಟುಮಾಡಿದ ಬೆನ್ನಲ್ಲೇ ಈ ಭೂಕಂಪ ಸಂಭವಿಸಿದೆ. ಆಟ್ಸುಮಾ ಪೂರ್ವದಲ್ಲಿ 40 ಕಿಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದುವಿದ್ದು, ಅಲ್ಲಿ ಬಹುತೇಕ ಸಾವುಗಳು ಸಂಭವಿಸಿವೆ ಎಂದು ಸರ್ಕಾರಿ ವಕ್ತಾರ ತಿಳಿಸಿದ್ದಾರೆ.

Recent Comments

Leave Comments

footer
Top