• 26 September 2018 16:49
Jai Kannada
Jai Kannada
Blog single photo
September 06, 2018

ವೈಮಾನಿಕ ತರಬೇತಿ ಶಾಲೆಯಲ್ಲಿ ರಾಗಿಂಗ್ ಪಿಡುಗು

ಬೆಂಗಳೂರು: ಒಂದು ಕಾಲದಲ್ಲಿ ಎಂಜಿನಿಯರಿಂಗ್ , ಮೆಡಿಕಲ್ ಕಾಲೇಜುಗಳಲ್ಲಿ ವ್ಯಾಪಕವಾಗಿದ್ದ ರ‌್ಯಾಗಿಂಗ್  ಪಿಡುಗು ಈಗ ವೈಮಾನಿಕ ತರಬೇತಿ ಶಾಲೆಗಳಿಗೂ ವಿಸ್ತರಿಸಿದೆ. ಪ್ರತಿಷ್ಠಿತ ವೈಮಾನಿಕ ತರಬೇತಿ ಕೇಂದ್ರ ಜಕ್ಕೂರಿನಲ್ಲಿ ಜೂನಿಯರ್ ಪೈಲಟ್‌ ತರಬೇತುದಾರರಿಗೆ  ಸೀನಿಯರ್ ವಿದ್ಯಾರ್ಥಿಗಳು ರ‌್ಯಾಗಿಂಗ್ ಮಾಡುತ್ತಿರುವ ಪ್ರಸಂಗ ಬಟಾಬಯಲಾಗಿದೆ.

ತರಬೇತಿ ನಿರತ ಮಹಿಳಾ ಪೈಲಟ್‌ಗಳ ಮೇಲೂ ರಾಗಿಂಗ್ ನಡೆಸಲಾಗಿದೆಯೆಂದು ಹೇಳಲಾಗುತ್ತಿದೆ.  ಈ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಕಿರಿಯ ವಿದ್ಯಾರ್ಥಿಗಳ ಬಟ್ಟೆ ಹರಿದು ಡ್ಯಾನ್ಸ್ ಮಾಡುವಂತೆ ಕಿರುಕುಳ ನೀಡುತ್ತಿರುವ ವಿಡಿಯೊ ವೈರಲ್ ಆಗಿದೆ. ಮುಖ್ಯ ತರಬೇತುದಾರ ಅಮಜಿತ್ ಸಿಂಗ್ ರಾಗಿಂಗ್ ಮಾಡಲು ಪ್ರಚೋದನೆ ಮಾಡಿದ್ದಲ್ಲದೇ ಸ್ವತಃ ವಿಡಿಯೊ ಚಿತ್ರೀಕರಿಸಿದ್ದ.

ಮುಖ್ಯ ತರಬೇತಿದಾರನ ಮೊಬೈಲ್‌ನಲ್ಲಿ ಇದು ವೈರಲ್ ಆಗಿದೆ. ಬಟ್ಟೆ ಹರಿದು ಮೈಮೇಲೆ ನೀರಿನ ಪೈಪ್‌ನಿಂದ ನೀರು ಹರಿಸುತ್ತಿರುವ ದೃಶ್ಯ ಕೂಡ ವೈರಲ್ ಆಗಿದೆ.

Recent Comments

Leave Comments

footer
Top