• 26 September 2018 16:25
Jai Kannada
Jai Kannada
Blog single photo
September 06, 2018

ರೂಪಾಯಿ ದರ ಕುಸಿತ: 1.4ರಿಂದ 2 ಶತಕೋಟಿ  ಡಾಲರ್ ಮಾರಾಟ ಮಾಡಿದ ಆರ್‌ಬಿಐ 

ಮುಂಬೈ: ಸ್ಥಳೀಯ ಮತ್ತು ಜಾಗತಿಕ ನಕಾರಾತ್ಮಕ ಸೂಚನೆಗಳು ರೂಪಾಯಿ ಮೇಲೆ ಹೊರೆಯಾಗಿ ಪರಿಣಮಿಸಿ, ಸತತವಾಗಿ 6ನೇ ಸೆಷನ್‌ಗೆ ರೂಪಾಯಿ ತನ್ನ ದುರ್ಬಲತೆಯ ಗೆರೆಯಲ್ಲಿ ಮುಂದುವರಿದಿದ್ದು, ಡಾಲರ್ ವಿರುದ್ಧ ಪಾತಾಳಕ್ಕೆ ಕುಸಿದಿದೆ.  ದೇಶೀಯ ಕರೆನ್ಸಿಯು ಡಾಲರ್ ವಿರುದ್ಧ 71.79 ಜೀವಮಾನದ ಕೆಳಮಟ್ಟಕ್ಕೆ ಕುಸಿದಿದೆ.

ಕಳೆದ 6 ಮಾರಾಟದ ಸೆಷನ್‌ಗಳಲ್ಲಿ ರೂಪಾಯಿ ದರ 165 ಪೈಸೆ ಕುಸಿಯಿತು.ಡಾಲರ್ ವಿರುದ್ಧ ರೂಪಾಯಿ 71.45ರಲ್ಲಿ ಆರಂಭವಾಗಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡು ಆರಂಭದ ವಹಿವಾಟಿನಲ್ಲಿ 71.38 ರೂ.ಗೆ ತಲುಪಿ ಮಂಗಳವಾರ ಮುಕ್ತಾಯಕ್ಕಿಂತ 18 ಪೈಸೆ ಏರಿಕೆಯಾಯಿತು.
 ವಹಿವಾಟುದಾರರ ಪ್ರಕಾರ, ರಿಸರ್ವ್ ಬ್ಯಾಂಕ್ ರೂಪಾಯಿ ಕುಸಿತವನ್ನು ಹತ್ತಿಕ್ಕಲು 1.4- 2 ಶತಕೋಟಿ ಡಾಲರ್ ಮಾರಾಟ ಮಾಡಿದೆ.

ಡಾಲರ್‌ಗೆ ರೂಪಾಯಿ ದರ 72ಕ್ಕಿಂತ ಹೆಚ್ಚು ಕುಸಿಯದಂತೆ ತಡೆಯಲು ಆರ್‌ಬಿಐ ಡಾಲರ್‌ಗಳನ್ನು ಮಾರಾಟ ಮಾಡಿತು ಎಂದು ಟಿಕರ್ ನಿವ್ಸ್ ಸರ್ವೀಸ್ ತಿಳಿಸಿದೆ.

Recent Comments

Leave Comments

footer
Top