• 19 November 2018 14:47
Jai Kannada
Jai Kannada
Blog single photo
September 06, 2018

ಸಲಿಂಗ ಕಾಮ ಇನ್ನು ಮುಂದೆ ಅಪರಾಧವಲ್ಲ: ಸುಪ್ರೀಂಕೋರ್ಟ್ ತೀರ್ಪು 

 ನವದೆಹಲಿ: ಸಲಿಂಗ ಕಾಮವು ಭಾರತದಲ್ಲಿ ಅಪರಾಧವಲ್ಲ ಮತ್ತು ಇದು ಮಾನಸಿಕ ಅಸ್ವಸ್ಥತೆ ಕೂಡ ಅಲ್ಲ ಎಂದು ಸುಪ್ರೀಂಕೋರ್ಟ್‌ನ ಐವರು ನ್ಯಾಯಾಧೀಶರು ಇಂದು ಘೋಷಿಸುವ ಮೂಲಕ ರಾಷ್ಟ್ರದಲ್ಲಿ ಸಲಿಂಗಿಗಳ ಹಕ್ಕುಗಳಿಗೆ ಮನ್ನಣೆ ನೀಡಿದ್ದಾರೆ. ಸುಪ್ರೀಂಕೋರ್ಟ್ ತನ್ನ ಹಿಂದಿನ 2013ರ ತೀರ್ಪನ್ನು ಬದಲಿಸಿ 377ನೇ ಸೆಕ್ಷನ್ ರದ್ದುಮಾಡಿತು.

ಸಲಿಂಗ ಕಾಮ ನಿಷೇಧವು ವಿಚಾರಹೀನ, ಸ್ವೇಚ್ಛಾಚಾರದ,ಸಮರ್ಥಿಸಲಾಗದ್ದು ಎಂದು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ತಿಳಿಸಿದರು.
ನಾವು ಪಕ್ಷಪಾತಗಳಿಗೆ ವಿದಾಯ ಹೇಳಿ ಎಲ್ಲಾ ಪೌರರಿಗೆ ಸ್ವಾತಂತ್ರ್ಯ ನೀಡಬೇಕು. ಲೈಂಗಿಕತೆ ಆಧರಿಸಿದ ಯಾವುದೇ ರೀತಿಯ ತಾರತಮ್ಯವು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.

 ಸಮಾನತೆಯಿಂದ ಕಾಣಬೇಕೆಂದು ದಶಕಗಳಿಂದ ಹೋರಾಟ ಮಾಡುತ್ತಿದ್ದ ಸಲಿಂಗಿ ಸಮುದಾಯವನ್ನು ಮೀರಿ ಮಿಲಿಯಾಂತರ ಜನರು ಈ ತೀರ್ಪನ್ನು ಸ್ವಾಗತಿಸಿದ್ದಾರೆ.

 158 ವರ್ಷಗಳ ಹಿಂದೆ ಈ ಕಾನೂನು ಜನರನ್ನು ಪ್ರೀತಿಯಿಂದ ವಂಚಿಸಿತು. ವೈಯಕ್ತಿಕ ಆಯ್ಕೆಗೆ ಗೌರವಿಸುವುದು ಸ್ವಾತಂತ್ರ್ಯದ ಮೂಲತತ್ವವಾಗಿದೆ. ಸಂವಿಧಾನದ ರೀತ್ಯ ಎಲ್‌ಜಿಬಿಟಿ ಸಮುದಾಯವು ಸಮಾನ ಹಕ್ಕು ಹೊಂದಿದ್ದಾರೆ ಎಂದು ನ್ಯಾಯಾಧೀಶರು ತಿಳಿಸಿದರು.

Recent Comments

Leave Comments

footer
Top