• 18 November 2018 14:09
Jai Kannada
Jai Kannada
Blog single photo
September 05, 2018

ಸುರತ್ಕಲ್ ಮೂಲದ ವ್ಯಕ್ತಿ ಸೌದಿ ಅಪಘಾತದಲ್ಲಿ ಸಾವು

ಮಂಗಳೂರು: ಸೌದಿ ಅರೇಬಿಯಾದ ಜುಬೈಲ್‌ನಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಅಪಘಾತವೊಂದರಲ್ಲಿ ಸುರತ್ಕಲ್ ನಿವಾಸಿಯೊಬ್ಬರು ಪ್ರಾಣ ತೆತ್ತಿದ್ದಾರೆ. ಬ್ರಹ್ಮಾವರದ ಹೊನ್ನಾಲದ ನಿವಾಸಿಯಾದ ಜಕೀರ್ ಹುಸೇನ್(38) ಕಳೆದ ನಾಲ್ಕು ವರ್ಷಗಳಿಂದ ಪ್ರಸಕ್ತ ಸುರತ್ಕಲ್ ಬಳಿಯ ಕೃಷ್ಣಾಪುರದ ಚೊಕ್ಕಬೆಟ್ಟು ನಿವಾಸಿಯಾಗಿದ್ದರು.

ಕಳೆದ 15 ವರ್ಷಗಳಿಂದ ಜಕೀರ್ ಸೌದಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿಯನ್ನು ಅಗಲಿದ್ದಾರೆ.

ಜಕೀರ್ ಕಳೆದ ತಿಂಗಳು ತಮ್ಮ ಸಂಬಂಧಿಯೊಬ್ಬರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಂಗಳೂರಿಗೆ ಆಗಮಿಸಿ ವಿವಾಹ ಸಮಾರಂಭ ಪೂರ್ಣಗೊಂಡ ಬಳಿಕ ಸೌದಿಗೆ ವಾಪಸಾಗಿದ್ದರು.
 

Recent Comments

Leave Comments

footer
Top