• 26 September 2018 16:15
Jai Kannada
Jai Kannada
Blog single photo
September 04, 2018

ಗನ್‌ಮೆನ್ ಕೈಯಲ್ಲಿ ಬೂಟು ಒರೆಸಿಕೊಂಡ ಡಿಸಿಎಂ

ಬೆಂಗಳೂರು: ಉಪಮುಖ್ಯಮಂತ್ರಿ ಡಾ.ಜಿ, ಪರಮೇಶ್ವರ ನಗರ ಅಲಸೂರು ಪ್ರದೇಶದಲ್ಲಿ ಸಿಟಿ ರೌಂಡ್ಸ್‌ಗೆ ತೆರಳಿದ್ದಾಗ ಗನ್‍‌ಮೆನ್ ಕೈಯಲ್ಲಿ  ಮಲಿನ ನೀರಿನಿಂದ ಕೊಳಕಾದ ತನ್ನ ಬಟ್ಟೆ ಸ್ವಚ್ಛಗೊಳಿಸಿಕೊಂಡು, ಬೂಟನ್ನು ಕೂಡ ಒರೆಸಿಕೊಂಡ  ಅಮಾನವೀಯ ಘಟನೆ ನಡೆದಿದೆ. ಅವರ ಆಜ್ಞೆಗೆ ತಲೆಬಾಗಿದ ಗನ್ ‌ಮೆನ್ ಅವರ ಬಟ್ಟೆಯನ್ನು ಸ್ವಚ್ಛಗೊಳಿಸಿ ಬೂಟುಗಳನ್ನು ಒರೆಸಿದ. ಅಧಿಕಾರಿಗಳು, ಜನತೆ ಮತ್ತು ಮಾಧ್ಯಮದ ಎದುರು ಡಿಸಿಎಂ ನಡವಳಿಕೆ ಗುಸು ಗುಸು ಚರ್ಚೆಗೆ  ಗ್ರಾಸ ಒದಗಿಸಿದೆ.

ಸುದ್ದಿಯನ್ನು ಅಳತೆಮೀರಿ ಪ್ರಕಟಿಸಿದ ತನ್ನ ಸ್ನೇಹಿತರಿಗೆ ಡಿಸಿಎಂ ಪರಮೇಶ್ವರ್ ಧನ್ಯವಾದ ಹೇಳಿದ್ದಾರೆ. ಏತನ್ಮಧ್ಯೆ ಜನರು ಮಾತ್ರ ಡಿಸಿಎಂ ವರ್ತನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಬ್ಬಂದಿ ಮೂಲಕ ಈ ರೀತಿಯ ಕೆಲಸ ಮಾಡಿಕೊಳ್ಳುವುದು ನ್ಯಾಯೋಚಿತವಲ್ಲ. ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳು ಇತರರಿಗೆ ಆದರ್ಶಪ್ರಾಯರಾಗಿರಬೇಕು.

ಬಟ್ಟೆ ಸ್ವಲ್ಪ ಕೊಳಕಾಗಿದ್ದನ್ನು ಸಹಿಸಿಕೊಳ್ಳದ ಡಿಸಿಎಂ ಜನರ ಸಮಸ್ಯೆಗಳನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆಂದು ಅನೇಕ ಮಂದಿ ಕೇಳಿದ್ದಾರೆ. 
 

Recent Comments

Leave Comments

footer
Top