• 19 November 2018 15:26
Jai Kannada
Jai Kannada
Blog single photo
September 04, 2018

ಕುಸಿದು ಬಿದ್ದ ಮೇಲ್ಸೇತುವೆ: ಅನೇಕ ಮಂದಿಗೆ ಗಾಯ     

ಕೋಲ್ಕತ್ತಾ : ದಕ್ಷಿಣ ಕೋಲ್ಕತ್ತಾದ ಜನದಟ್ಟಣೆಯ ಪ್ರದೇಶದಲ್ಲಿ ಮಜರತ್ ಸೇತುವೆಯ ಭಾಗವೊಂದು ಇಂದು ಮಧ್ಯಾಹ್ನ ಕುಸಿದುಬಿದ್ದಿದ್ದರಿಂದ ಅನೇಕ ಮಂದಿ ಕುಸಿದ ಸೇತುವೆಯ ಅಡಿಯಲ್ಲಿ ಸಿಕ್ಕಿಬಿದ್ದಿದ್ದು, ಕೆಲವರು ವಾಹನಗಳ ಸಮೇತ  ಸಿಕ್ಕಿಬಿದ್ದಿರುವ ಆಘಾತಕಾರಿ ಘಟನೆ ಸಂಭವಿಸಿದೆ. ಗಾಯಗೊಂಡ 9 ಮಂದಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ತಾವು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾಗ ಒಬ್ಬ ವ್ಯಕ್ತಿ ಸತ್ತಿದ್ದಾನೆಂದು ಸ್ಥಳಕ್ಕೆ ಧಾವಿಸಿದ ಸ್ಥಳೀಯರು ತಿಳಿಸಿದ್ದಾರೆ. ಸಮಿಪದ ಫೋರ್ಟ್ ವಿಲಿಯಂನಲ್ಲಿ ನೆಲೆ ಹೊಂದಿರುವ ಸೇನೆ ರಕ್ಷಣಾ ಕಾರ್ಯಕ್ಕೆ ತನ್ನ ಸಿಬ್ಬಂದಿಯನ್ನು ಕಳಿಸಿದೆ.

 ಪೋರ್ಟ್ ಟ್ರಸ್ಟ್ ನಿರ್ಮಿಸಿದ 40 ವರ್ಷ ಹಳೆಯದಾದ ಸೇತುವೆಯ ದೊಡ್ಡ ಭಾಗವೊಂದು ಕೆಳಕ್ಕೆ ಕುಸಿದುಬಿತ್ತು. ಕುಸಿದ ಭಾಗವು ರಸ್ತೆಯ ಮೇಲೆ ಬಿದ್ದು, ಕೆಳಗೆ ಪ್ರಯಾಣಿಸುತ್ತಿದ್ದ ಮಿನಿ ಬಸ್ ಸೇರಿದಂತೆ 9 ವಾಹನಗಳು ನಜ್ಜುಗುಜ್ಜಾಗಿವೆ. ಅನೇಕ ಮಂದಿ ದ್ವಿಚಕ್ರವಾಹನ ಸವಾರರು ಕುಸಿದ ಸೇತುವೆಯ ಭಾಗದಲ್ಲಿ ಸಿಕ್ಕಿಬಿದ್ದಿದ್ದಾರೆ.
ಸೇತುವೆ ಕುಸಿತವನ್ನು ಟೀಕಿಸಿದ ಬಿಜೆಪಿಯ ಮುಕುಲ್ ರಾಯ್, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸೇತುವೆ ಕುಸಿತಕ್ಕೆ ಕಾರಣಕರ್ತರು. ನಗರದ ಸೌಂದರ್ಯೀಕರಣ ಮಾಡುತ್ತಿರುವುದಾಗಿ ಅವರು ತಿಳಿಸುತ್ತಾರೆ. ಆದರೆ ಹಳೆಯ ನಿರ್ಮಾಣಗಳ ದುರಸ್ತಿ ಅವರ ಮನಸ್ಸಿನಲ್ಲಿಲ್ಲ. ರಾಜ್ಯ ಸರ್ಕಾರ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದಿದ್ದಾರೆ.
 

Recent Comments

Leave Comments

footer
Top